ಬೆಳಗಾವಿ: ಕನ್ನಡಿಗರಿಗೆ ಗೊಡ್ಡು ಬೆದರಿಕೆ ಹಾಕಿ ಬೆಳಗಾವಿಯ ಎಂಇಎಸ್ ಮುಖಂಡ ಶುಭಂ ಸಾಳುಂಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕನ್ನಡಿಗರಿಗೆ ಧಮ್ಕಿ ಹಾಕಿ ಎಚ್ಚರಿಕೆ ನೀಡಿದ್ದಕ್ಕೆ ಈಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಎರಡೂ ಒಂದಾಗಿವೆ ಎಂದು ಹೇಳಿದ್ದ ಸಾಳುಂಕೆ ಹಳದಿ, ಕೆಂಪು ಬಣ್ಣದ ಶಾಲು ಧರಿಸಿದವರನ್ನು ನಾವು ಕಂಡಲ್ಲಿ ಹೊಡೆಯುತ್ತೇವೆ, ನಮ್ಮ ಶಾಂತಿಯುತ ಹೋರಾಟವನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಾವು ಬೇರೆ ರೀತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡಿಗರು ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿ ಉದ್ದಟತನ ಮೆರೆದಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ