ಅಮರಾವತಿ ಭೂ ಹಗರಣ: ಚಂದ್ರಬಾಬು ನಾಯ್ಡು ವಿರುದ್ಧ ಪ್ರಕರಣ ದಾಖಲು, ಸಿಐಡಿಯಿಂದ ನೋಟಿಸ್ ಜಾರಿ

ಆಂಧ್ರ ಪ್ರದೇಶದ ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆಯು (ಸಿಐಡಿ) ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು ವಿರುದ್ಧ ಎಫ್ಐಆರ್ ದಾಖಲಿಸಿದೆ. ಮಂಗಳಗಿರಿ ವೈಎಸ್‌ಆರ್‌ಸಿಪಿ ಶಾಸಕ ಅಲ್ಲಾ ರಾಮ ಕೃಷ್ಣ ರೆಡ್ಡಿ (ನಾನಿ) ಅವರ ದೂರಿನ ಆಧಾರದ ಮೇಲೆ ಟಿಡಿಪಿಯ ಮಾಜಿ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಪೊಂಗುರು ನಾರಾಯಣ ಅವರನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಮಾರ್ಚ್ 23 ರಂದು ವಿಜಯವಾಡದ ಸಿಐಡಿ ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನಾಯ್ಡು ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಎಫ್‌ಐಆರ್ ಪ್ರಕಾರ, ಶಾಸಕರ ದೂರನ್ನು ಫೆಬ್ರವರಿ 24 ರಂದು ರಾಜ್ಯ ಸಿಐಡಿಯ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ.ಸುನೀಲ್ ಕುಮಾರ್ ಅವರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. ಮಂಗಳಗಿರಿ ಕ್ಷೇತ್ರದ ಕೆಲವು ರೈತರು ಶಾಸಕ ಶಾಸಕ ಅಲ್ಲಾ ರಾಮ ಕೃಷ್ಣ ರೆಡ್ಡಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಿಂದಿನ ಟಿಡಿಪಿ ಸರ್ಕಾರವು “ತಮ್ಮ ಜಮೀನುಗಳ ಬಗ್ಗೆ ಗೊಂದಲ ಮತ್ತು ಅಭದ್ರತೆಯ ಭಯದಲ್ಲಿ” ಇರಿಸುವ ಮೂಲಕ “ತಮ್ಮ ಭೂಮಿಯನ್ನು ಕಾನೂನುಬಾಹಿರವಾಗಿ ತೆಗೆದುಕೊಂಡು ಮೋಸ ಮಾಡಿದೆ. ಪಿತೂರಿಯ ಭಾಗವಾಗಿದ್ದ ಮಧ್ಯವರ್ತಿಗಳ ಗುಂಪೊಂದು ರೈತರು ಯಾವುದೇ ಪರಿಹಾರವಿಲ್ಲದೆ ಸರ್ಕಾರಕ್ಕೆ ತಮ್ಮ ನಿಯೋಜಿತ ಭೂಮಿಯನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ನಂಬಿಸಿದ್ದರು, ಮಾಜಿ ಮುಖ್ಯಮಂತ್ರಿ ನಾಯ್ಡು ಮತ್ತು ನಾರಾಯಣ ಮಾಡಿದ ಅಕ್ರಮಗಳು “ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜನರಿಗೆ ಮತ್ತು ದುರ್ಬಲ ವರ್ಗಗಳಿಗೆ ಸರಿಪಡಿಸಲಾಗದ ನಷ್ಟವನ್ನುಂಟು ಮಾಡಿದೆ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ, ಮಾರ್ಚ್ 12 ರಂದು ಸಿಐಡಿ ಡಿಎಸ್ಪಿ ಎಸ್ ಸೂರ್ಯ ಭಾಸ್ಕರ್ ರಾವ್ ಅವರು ವರದಿ ಸಲ್ಲಿಸಿದ್ದಾರೆ, ವಿಚಾರಣಾ ವರದಿಯ ಆಧಾರದ ಮೇಲೆ, ಮಾರ್ಚ್ 12 ರಂದು ನಾಯ್ಡು ಮತ್ತು ನಾರಾಯಣ ವಿರುದ್ಧ ಸೆಕ್ಷನ್ 166, 167, 217, 34,35, 36 ಮತ್ತು 37 ಹಾಗೂ ಭಾರತೀಯ ದಂಡ ಸಂಹಿತೆಯ 120 ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಜೊತೆಗೆ ಎಸ್‌ಸಿ / ಎಸ್‌ಟಿ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಆಂಧ್ರಪ್ರದೇಶದ ನಿಯೋಜಿತ ಭೂಮಿ (ವರ್ಗಾವಣೆ ನಿಷೇಧ) ಕಾಯ್ದೆ, 1977 ರ ಸೆಕ್ಷನ್ 7 ಹಾಕಲಾಗಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು
 ಚಿತ್ರ ಕೃಪೆ-ಇಂಟರ್ನೆಟ್‌

ಸಿಐಡಿ ಹೊರಡಿಸಿದ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಿದ ಟಿಡಿಪಿ ರಾಜ್ಯ ಅಧ್ಯಕ್ಷ ಕಿಂಜರಾಪು ಅಚನ್ನೈಡು ಈ ಕ್ರಮವನ್ನು ಆಡಳಿತಾರೂಡ ವೈಎಸ್‌ಆರ್‌ಸಿಪಿ ಪಾರ್ಟಿಯ”ಪ್ರತೀಕಾರದ ಕ್ರಮ” ಎಂದು ಹೇಳಿದ್ದಾರೆ. “ಟಿಡಿಪಿ ಸರ್ಕಾರವು ರೈತರ ಒಪ್ಪಿಗೆಯೊಂದಿಗೆ ರಾಜಧಾನಿಗೆ ನಿಗದಿಪಡಿಸಿದ ಭೂಮಿ ಸ್ವಾಧೀನಪಡಿಸಿಕೊಂಡಿತ್ತು ಎಂದು ಹೇಳಿದ ಅವರು, ದೇಶದ ಇತಿಹಾಸದಲ್ಲಿ ಎಸ್‌ಸಿ ಎಸ್‌ಟಿ ಪಿಒಎ ಕಾಯ್ದೆಯಡಿ ಯಾವುದೇ ಮಾಜಿ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ,
ಸ್ವತಃ ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರದ ಶಾಸಕ ಅಲ್ಲಾ ನಾನಿ ಅವರ ದೂರಿನ ಆಧಾರದ ಮೇಲೆ ಇಂತಹ ಪ್ರಕರಣ ದಾಖಲಿಸಬಹುದೇ ಎಂದು ಪ್ರಶ್ನಿಸಿದರು. . ವೈಎಸ್ಆರ್ಸಿಪಿ ಸರ್ಕಾರವು ಬಡ ರೈತರಿಗೆ ಕೃಷಿಗಾಗಿ ನಿಯೋಜಿಸಲಾದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement