ಐಕ್ಯೂಏರ್ ವರದಿ:ಸತತ ಮೂರನೇ ವರ್ಷವೂ ದೆಹಲಿಗೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಕುಖ್ಯಾತಿ…!

ಚಿತ್ರಗಳ ಕೃಪೆ-ಇಂಟರ್ನೆಟ್‌

2020ರಲ್ಲಿ ಸತತ ಮೂರನೇ ವರ್ಷವೂ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿ ಪಡೆದಿದೆ.
ಸ್ವಿಸ್ ಗುಂಪಿನ ಐಕ್ಯೂಏರ್ (IQAir,) ಅಧ್ಯಯನ ವರದಿ ಸತತ ಮೂರನೇ ವರ್ಷವೂ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂದು ಹೇಳಿದೆ.
ಶ್ವಾಸಕೋಶದ ಹಾನಿಕಾರಕ ವಾಯುಗಾಮಿ ಕಣಗಳ ಸಾಂದ್ರತೆಯ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ.
ವಾಯು ಗುಣಮಟ್ಟದ ಮಟ್ಟವನ್ನು PM2.5 ಎಂದು ಕರೆಯಲಾಗುತ್ತದೆ. 106 ದೇಶಗಳ ದತ್ತಾಂಶ ಸಂಗ್ರಹಿಸಿದ ಐಕ್ಯೂಏರ್‌ 2020ರ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ, ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ 35 ನಗರಗಳು ಭಾರತದಲ್ಲಿಯೇ ಇವೆ. ಸಂಶೋಧನೆಗಳು ದೇಶದ ವಾರ್ಷಿಕ ಸರಾಸರಿ ಕಣಗಳಾದ PM2.5, 2.5 ಮೈಕ್ರಾನ್‌ಗಳಿಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ವಾಯುಗಾಮಿ ಕಣಗಳನ್ನು ಆಧರಿಸಿವೆ. PM2.5 ಗೆ ದೀರ್ಘಕಾಲದ ವರೆಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಮತ್ತು ಹೃದಯದ ತೊಂದರೆಗಳು ಸೇರಿದಂತೆ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವರದಿ ಹೇಳಿದೆ.
2020 ರಲ್ಲಿ, ಒಂದು ಮೀಟರ್ ಗಾಳಿಯಲ್ಲಿ ನವ ದೆಹಲಿಯ ಸರಾಸರಿ ವಾರ್ಷಿಕ ಪಿಎಂ 2.5 ಸಾಂದ್ರತೆಯು 84.1 ಆಗಿತ್ತು ಎಂದು ಅಧ್ಯಯನವು ಹೇಳಿದೆ, ಬೀಜಿಂಗ್‌ನ ಮಟ್ಟಕ್ಕಿಂತ ಇದು ಎರಡು ಪಟ್ಟು ಹೆಚ್ಚಾಗಿದೆ, ಬೀಜಿಂಗ್‌ನಲ್ಲಿ ಇದೇ ವರ್ಷ ಇದು 37.5 ರಷ್ಟಿತ್ತು, ಇದು ವಿಶ್ವದ 14ನೇ ಅತ್ಯಂತ ಕಲುಷಿತ ನಗರವಾಗಿದೆ . ಗ್ರೀನ್‌ಪೀಸ್ ಆಗ್ನೇಯ ಏಷ್ಯಾ ವಿಶ್ಲೇಷಣೆ ಮತ್ತು ಐಕ್ಯೂಏರ್ ಇತ್ತೀಚಿನ ಅಧ್ಯಯನದ ಪ್ರಕಾರ, 2020 ರಲ್ಲಿ ನವದೆಹಲಿಯಲ್ಲಿ ವಾಯುಮಾಲಿನ್ಯದಿಂದ 54,000 ಅಕಾಲಿಕ ಮರಣಗಳಿಗೆ ಕಾರಣವಾಗಿದೆ.
ದೆಹಲಿಯ ಗಾಳಿಯ ಗುಣಮಟ್ಟ ಕುಸಿಯಲು ಕಾರಣವಾಗುವ ವಿವಿಧ ಅಂಶಗಳು
ಕಳೆದ ವರ್ಷ ಹೇರಿದ ರಾಷ್ಟ್ರವ್ಯಾಪಿ ಕೊರೊನಾ ವೈರಸ್‌ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ವಾರ್ಷಿಕ ಸರಾಸರಿ PM2.5 ಮಟ್ಟದಲ್ಲಿ 11% ರಷ್ಟು ಕುಸಿತದ ಹೊರತಾಗಿಯೂ, ಭಾರತವು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಂತರ ವಿಶ್ವದ ಮೂರನೇ ಅತಿ ಹೆಚ್ಚು ಕಲುಷಿತ ರಾಷ್ಟ್ರವಾಗಿ ಹೊರಹೊಮ್ಮಿದೆ. ”ಭಾರತದಲ್ಲಿ ವಾಯುಮಾಲಿನ್ಯ ಅಪಾಯಕಾರಿಯಾಗಿದೆ ಎಂದು ವರದಿ ಹೇಳಿದೆ.
ಕಳೆದ ವರ್ಷ, ದೆಹಲಿಯ 20 ಮಿಲಿಯನ್ ನಿವಾಸಿಗಳು, ಲಾಕ್ಡೌನ್ ನಿರ್ಬಂಧಗಳಿಂದಾಗಿ ಬೇಸಿಗೆಯಲ್ಲಿ ಸ್ವಚ್ಛ ಗಾಳಿ ಉಸಿರಾಡಿದ್ದರು, ನೆರೆಯ ರಾಜ್ಯವಾದ ಪಂಜಾಬಿನಲ್ಲಿ ಕೃಷಿ ಭೂಮಿಗೆ ಬೆಂಕಿ ಹಾಕುವ ತೀವ್ರವಾಗಿ ಹೆಚ್ಚಾದ ನಂತರ ಚಳಿಗಾಲದಲ್ಲಿ ವಿಷಕಾರಿ ಗಾಳಿಯೊಂದಿಗೆ ದೆಹಲಿಯವರು ಹೋರಾಡಬೇಕಾಯಿತು.

ಪ್ರಮುಖ ಸುದ್ದಿ :-   ಹೈದರಾಬಾದ್ ಮಳೆ: ಗೋಡೆ ಕುಸಿದು 7 ಕಾರ್ಮಿಕರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement