ಕನ್ನಡಿಗರು ಅಂಗಡಿ ಬಂದ್‌ ಮಾಡುವಂತೆ ಕೊಲ್ಲಾಪುರದಲ್ಲಿ ಶಿವಸೇನೆ ಧಮ್ಕಿ..!

ಬೆಳಗಾವಿ: ಶಿವಸೇನೆ ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡಿಗರ ವಿರುದ್ಧ ಪುಂಡಾಟಿಕೆ ನಡೆಸಿದ್ದು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡುವಂತೆ ಧಮ್ಕಿ ಹಾಕಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾಯ ಶಿವಸೇನೆ ಮುಖಂಡ ವಿಜಯ ದೇವಣೆ ಮಾರ್ಚ್ 20ರಂದು ಮಹಾರಾಷ್ಟ್ರದ ಸಾಂಗ್ಲಿ, ಮಿರಜ, ಕೊಲ್ಲಾಪುರ, ಸಾತಾರಾ ಮೊದಲಾದ ಪ್ರದೇಶಗಳಲ್ಲಿರುವ ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡಿ ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಬೆಂಬಲ ಸೂಚಿಸಬೇಕೆಂದು ಕರೆ ನೀಡಿ ತಮ್ಮ ಉದ್ಧಟತನ ಮೆರೆದಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಸಾತಾರ ಹಾಗೂ ಮಿರಜ ಮೊದಲಾದೆಡೆ ವ್ಯಾಪಾರ-ವಹಿವಾಟು ಮಾಡುತ್ತಿರುವ ಕನ್ನಡಿಗರ ಮೇಲೆ ತಮ್ಮ ಸಿಟ್ಟು ಹೊರಹಾಕಿರುವ ಶಿವಸೇನೆ ಮುಖಂಡ ವಿಜಯ ದೇವಣೆ ಕನ್ನಡಿಗರು ಮಾರ್ಚ್ 20ರಂದು ತಮ್ಮ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡುವಂತೆ ಧಮ್ಕಿ ಹಾಕಿದ್ದಾರೆ.
ಅಲ್ಲದೆ, ಮಾರ್ಚ್ 20ರೊಳಗೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಿಸಿರುವ ಕನ್ನಡದ ಧ್ವಜ ತೆರವು ಮಾಡದೆ ಹೋದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡುತ್ತೇವೆ ಎಂದು ಶಿವಸೇನೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ.
ಕೊಲ್ಲಾಪುರದಲ್ಲಿನ ಕನ್ನಡದ ನಾಮಫಲಕಗಳಿಗೆ ಈಗಾಗಲೇ ಮಸಿ ಬಳಿದು ಪುಂಡಾಟಿಕೆ ನಡೆಸಿದ್ದ ಶಿವಸೇನೆ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡದ ಅಂಗಡಿಕಾರರಿಗೆ ಮಾರ್ಚ್ 20ರೊಳಗೆ ಅಂಗಡಿಗಳನ್ನು ಬಂದ್ ಮಾಡುವಂತೆ ಧಮ್ಕಿ ಹಾಕಿದೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

5 / 5. 1

ಶೇರ್ ಮಾಡಿ :

  1. Geek

    ಶಿವಸೇನೆಯವರು ಭಾಷಾಂಧತೆಯೆಂಬ ಭಾವನಾತ್ಮಕ ವಿಷಯಗಳನ್ನು ಎತ್ತಿ ಕೊರೋನಾ ನಿಭಾಯಿಸಲಾಗದ ವೈಫಲ್ಯತೆಯನ್ನು ಮರೆಮಾಚುತ್ತಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement