ಮಹಾರಾಷ್ಟ್ರದಲ್ಲಿ ೨೦೦೦ ವರ್ಷ ಪ್ರಾಚೀನ ಗುಹೆಗಳು ಪತ್ತೆ…!

ಮಹಾರಾಷ್ಟ್ರದ ಜಲಗಾಂವ ಜಿಲ್ಲೆಯಲ್ಲಿ ಸುಮಾರು ೨೦೦೦ ವರ್ಷ ಪುರಾತನವಾದ ಗುಹೆಗಳು ಪತ್ತೆಯಾಗಿವೆ.
ಜಿಲ್ಲೆಯ ಥೋಪ್ಡಾ ತೆಹಸಿಲ್‌ ಪ್ರದೇಶದಲ್ಲಿ ಗುಹೆಗಳು ಪತ್ತೆಯಾಗಿವೆ. ದಕ್ಷಿಣ ಭಾರತವನ್ನು ಹೆಚ್ಚು ಅವಧಿಯವರೆಗೆ ಆಳಿದ ಶಾತವಾಹನರ ಕಾಲದ ರಹಸ್ಯ ಗುಹೆಗಳು ಇವಾಗಿರಬಹುದು ಎಂದು ಜಲಗಾಂವ ಪುರಾತತ್ವ ಶಾಸ್ತ್ರಜ್ಞ ರಾಮರಾವ್‌ ಬೋಬ್ಡೆ ತಿಳಿಸಿದ್ದಾರೆ. ಚೌಗಾವ್‌ ಗ್ರಾಮಸ್ಥರಿಗೆ ಗುಹೆಗಳಿರುವುದು ತಿಳಿದಿರಲಿಲ್ಲ. ಡೆಕ್ಕನ್‌ ಪುರಾತತ್ವ ಸಂಶೋಧನಾ ಸಂಸ್ಥೆಯ ಮ್ಯುಸಿಯಂ ವಿಭಾಗದ ನಿರ್ದೇಶಕ ಬೊಬ್ಡೆ ಅವರ ನೇತೃತ್ವದಲ್ಲಿ ಅಶೋಕ ಪಾಟೀಲ, ಅಥರ್ವ್‌ ಬೋಬ್ಡೆ, ವಿಶ್ರಾಮ್‌ ತೇಲಿ, ಡಾ. ಗೋಪಾಲ್‌ ಪಾಟೀಲ್‌ ಅವರನ್ನೊಳಗೊಂಡ ತಂಡ ಗುಹೆಗಳನ್ನು ಪತ್ತೆ ಮಾಡಿದೆ.
ಭೀರಮ್‌ ಘಾಟ್‌ ರಸ್ತೆಯ ಬಳಿ ಗುಹೆಗಳನ್ನು ಪತ್ತೆ ಮಾಡಲಾಗಿದೆ. ಚೌಗಾವ್‌ ಗ್ರಾಮದ ಹೊರವಲಯದ ಶಿವದೇವಸ್ಥಾನದಿಂದ ೨ ಕಿ.ಮೀ. ದೂರದಲ್ಲಿ ಗುಹೆಗಳಿವೆ. ಇಲ್ಲಿಂದ ಮುಂದೆ ೩ ಕಿ.ಮೀ. ಸಾಗಿದರೆ ಶಾತವಾಹನ ರಾಜರು ನಿರ್ಮಿಸಿದ ಕೋಟೆ ಇದೆ. ಗುಹೆಗಳಿಗೆ ಆಗಮನ ಹಾಗೂ ನಿರ್ಗಮನದ ದ್ವಾರಗಳಿವೆ. ಗುಹೆಯ ಪ್ರವೇಶ ಮಾಡುತ್ತಿದ್ದಂತೆಯೇ ನೀರಿನ ತೊಟ್ಟಿಗಳಿವೆ. ಒಳಗೆ ಕಲ್ಲಿನ ಕಂಬಗಳು ಗೋಚರಿಸುತ್ತವೆ. ಗುಹೆಗಳಲ್ಲಿ ಯಾವುದೇ ದೇವರ ಅಥವಾ ರಾಜರ ಚಿತ್ರಗಳ ಕೆತ್ತನೆ ಇರುವುದಿಲ್ಲ, ಯಾವುದೇ ವಿಗ್ರಹಗಳೂ ಇಲ್ಲ. ಪ್ರಾಯಶಃ ರಾಜರು, ಇಲ್ಲವೇ ಸೇನಾಪತಿಗಳು ಅಡಗಿಕೊಳ್ಳುತ್ತಿದ್ದ ತಾಣಗಳಾಗಿರಬಹುದು ಎಂದು ಪುರಾತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement