ಜೊಮಾಟೊ ವಿವಾದ: ವಿಳಾಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾದ ನಂತರ ಬೆಂಗಳೂರು ಬಿಟ್ಟ ಹಿತೇಶಾ

posted in: ರಾಜ್ಯ | 0

ಬೆಂಗಳೂರು: ಜೊಮಾಟೊ ವಿವಾದದಲ್ಲಿ ಎರಡನೇ ಎಫ್‌ಐಆರ್ ದಾಖಲಾದ ಒಂದು ದಿನದ ನಂತರ, ಹಿತೇಶಾ ಚಂದ್ರಾನಿ ಬುಧವಾರ ಬೆಂಗಳೂರಿನಿಂದ ಹೊರಟಿದ್ದಾರೆ ಎಂದು ನಗರ ಪೊಲೀಸರು ಹೇಳಿದ್ದಾರೆ.
ತನ್ನ ಮೂಗಿಗೆ ಹೊಡೆದಿದ್ದಾನೆ ಎಂದು ಆರೋಪಿಸಿ ಜೊಮಾಟೊ ಡೆಲಿವರಿ ಎಕ್ಸಿಕ್ಯೂಟಿವ್ ಕಾಮರಾಜ್ ವಿರುದ್ಧ ಹಿತೇಶಾ ಪೊಲೀಸರಿಗೆ ದೂರು ನೀಡಿದ್ದರು. ಹಿತೇಶಾ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಲ್ಲಿಸಿದ ಪೊಲೀಸರಿಗೆ ಕಾಮರಾಜ್ ಕೌಂಟರ್ ದೂರು ನೀಡಿದ ಬೆನ್ನಲ್ಲೇ ಅವರು ಬೆಂಗಳೂರಿನಿಂದ ಹೊರಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕರಣದ ಬಗ್ಗೆ ಬಿಸಿ ಚರ್ಚೆಗಳು ನಡೆಯುತ್ತಿದ್ದಂತೆಯೇ, ಹಿತೇಶಾ ಅವರ ಮನೆಯ ವಿಳಾಸ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
ಮಾರ್ಚ್ 15 ರಂದು ದಾಖಲಾದ ಎರಡನೇ ಎಫ್‌ಐಆರ್‌ನಲ್ಲಿ ಹಿತೇಶಾ ಅವರು ಕಾಮರಾಜ್‌ನನ್ನು ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. “ನಾವು ಅವರ ಮನೆಗೆ ಹೋದಾಗ ಯಾರೂ ಬಾಗಿಲು ತೆರೆಯಲಿಲ್ಲ” ಎಂದು ಎಲೆಕ್ಟ್ರಾನಿಕ್ ಸಿಟಿ ಹಂತ 1 ರ ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಹಿತೇಶಾ ಅವರ ಬೆಂಗಳೂರು ನಿವಾಸದ ಅಂಚೆ ವಿಳಾಸ ನೀಡಿದ್ದರಿಂದ ಅವರ ಸುರಕ್ಷತೆ ಮತ್ತು ಗೌಪ್ಯತೆಗೆ ತೊಂದರೆಯಾಗಿದೆ. ಎಫ್‌ಐಆರ್ ಬಗ್ಗೆ ಮಾತನಾಡಲು ಜನರು ತಮ್ಮ ಮನೆಗೆ ಬರಬಹುದು ಎಂಬ ಕಾರಣಕ್ಕೆ ಅವರು ಇಲ್ಲಿಂದ ತೆರಳಿರಬಹುದು” ಎಂದು ಪೊಲೀಸರು ಹೇಳಿದ್ದಾರೆ.ಅಲ್ಲದೆ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಆಹಾರ ಪ್ಯಾಕೇಜ್ ಅನ್ನು ಹಿಂಪಡೆಯುವ ವಿಚಾರವಾಗಿ ಜೊಮಾಟೊ ಡೆಲಿವರಿ ಎಕ್ಸಿಕ್ಯೂಟಿವ್ ಕಾಮರಾಜ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಹಿತೇಶಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ನಂತರ ವಿವಾದ ಉಂಟಾಯಿತು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನಸಭಾ ಚುನಾವಣೆ 2023 : ಏಪ್ರಿಲ್ 6 ಅಥವಾ 7 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ-ಪ್ರಹ್ಲಾದ ಜೋಶಿ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.5 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement