ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ: 23 ಸಾವಿರ ದಾಟಿದ ದೈನಂದಿನ ಪ್ರಕರಣಗಳ ಸಂಖ್ಯೆ…!!

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಕಳೆದ 24 ತಾಸಿನಲ್ಲಿ 23,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ..!
ಬುಧವಾರ 23,179 ಪ್ರಕರಗಳು ದಾಖಲಾಗಿವೆ ಹಾಗೂ ಒಟ್ಟು 84 ಜನರು ಮೃಪಟ್ಟಿದ್ದಾರೆ. ಇದು ಈ ವರ್ಷದ ಅತಿ ಹೆಚ್ಚು ಸಂಖ್ಯೆಯ ದೈನಂದಿನ ಪ್ರಕರಣಗಳಾಗಿವೆ. ಮಂಗಳವಾರ, ರಾಜ್ಯವು 17,864 ಪ್ರಕರಣಗಳು ದಾಖಲಾಗಿದ್ದವು. , ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳು ಈಗ 23,70,507 ಆಗಿದೆ.
ಬುಧವಾರ 9,138 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಈಗ 1,52,760 ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ 3,300 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ನಾಗ್ಪುರ ಜಿಲ್ಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.ಜಿಲ್ಲೆಯಲ್ಲಿ ೧೬ ಸಾವಿಗಳು ಸಂಭವಿಸಿವೆ.
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಎಲ್ಲಾ ಸಕ್ರಿಯ ಪ್ರಕರಣಗಳಲ್ಲಿ 60%ಕ್ಕಿಂತ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ ಮೋದಿ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಹಲವಾರು ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ಚರ್ಚಿಸಿದ್ದಾರೆ.
ನಾವು ಕಾರ್ಯಪ್ರವೃತ್ತರಾಗಿರಬೇಕು. ಅಗತ್ಯವಿರುವ ಕಡೆ ಮೈಕ್ರೊ ಕಂಟೈನ್‌ಮೆಂಟ್ ವಲಯಗಳನ್ನು ಹಿಂಜರಿಕೆಯಿಲ್ಲದೆ ಘೋಷಿಸಬೇಕು” ಎಂದು ಕೋವಿಡ್ -19 ಪ್ರಕರಣಗಳ ಉಲ್ಬಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಹೇಳಿದರು.
ನಾವು ಈಗ ಕೋವಿಡ್ ಅನ್ನು ನಿಲ್ಲಿಸದಿದ್ದರೆ, ರಾಷ್ಟ್ರವ್ಯಾಪಿ ಸ್ಫೋಟ ಸಂಭವಿಸಬಹುದು. ನಾವು ಎರಡನೇ ಕೊರೊನಾ ಅಲೆ ಪ್ರವೇಶಿಸುವ ಕಾಲಘಟ್ಟದಲ್ಲಿಯೇ ತಕ್ಷಣವೇ ನಿಲ್ಲಿಸಬೇಕಾಗುತ್ತದೆ ಮತ್ತು ಇದಕ್ಕಾಗಿ ನಾವು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಾಮಾನ್ಯ ಲಾಕ್‌ಡೌನ್ ಹೇರುವ ಬದಲು ಒಂದು ಪ್ರದೇಶದ ಮೈಕ್ರೋ-ಜೋನಿಂಗ್ ಅನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಕೋವಿಡ್ -19 ಹರಡುವಿಕೆಯನ್ನು ನಿಗ್ರಹಿಸಲು ಪರೀಕ್ಷೆ ಮತ್ತು ಸಂಪರ್ಕವನ್ನು ಪತ್ತೆ ಹಚ್ಚುವತ್ತ ಗಮನಹರಿಸುವಂತೆ ಅವರು ರಾಜ್ಯಗಳಿಗೆ ನಿರ್ದೇಶನ ನೀಡಿದರು.
ಕೆಲವು ಪ್ರದೇಶಗಳಲ್ಲಿ ಮಾತ್ರ ಏಕೆ ಕಡಿಮೆ ಪರೀಕ್ಷೆ ಇದೆ ಎಂಬುದು ಚಿಂತನೆಯ ವಿಷಯವಾಗಿದೆ. ಈ ಪ್ರದೇಶಗಳಲ್ಲಿ ಏಕೆ ಕಡಿಮೆ ವ್ಯಾಕ್ಸಿನೇಷನ್ ಇದೆ? ಇದು ಉತ್ತಮ ಆಡಳಿತದ ಪರೀಕ್ಷೆಯ ಸಮಯ ಎಂದು ನಾನು ಭಾವಿಸುತ್ತೇನೆ. ನಮ್ಮ ವಿಶ್ವಾಸವು ಅತಿಯಾದ ಆತ್ಮವಿಶ್ವಾಸಕ್ಕೆ ತಿರುಗಬಾರದು. ನಮ್ಮ ಯಶಸ್ಸು ನಿರ್ಲಕ್ಷ್ಯಕ್ಕೂ ತಿರುಗಬಾರದು “ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement