ಬ್ಯಾಂಕ್ ಗ್ರಾಹಕರೇ ಎಚ್ಚರ ವಹಿಸಿ…ನಿಮ್ಮ ತಪ್ಪಿಗೆ ಬ್ಯಾಂಕ್ ಹೊಣೆಯಲ್ಲ

ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬರೂ ಇದನ್ನು ಗಮನಿಸಬೇಕಿದೆ. ಗ್ರಾಕರ ತಪ್ಪಿನಿಂದ ಖಾತೆಯಲ್ಲಿರುವ ಹಣ ಖಾಲಿಯಾದರೆ ಅದಕ್ಕೆ ಬ್ಯಾಂಕ್ ಜವಾಬ್ದಾರಿಯಾಗುವುದಿಲ್ಲ. ಗ್ರಾಹಕರಿಗೆ ಹಣ ವಾಪಸ್ ಸಿಗುವುದೂ ಇಲ್ಲ.
ಗುಜರಾತಿನ ಅಮ್ರೆಲಿ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಡಿಆರ್‌ಸಿ ಮಹತ್ವದ ಆದೇಶ ನೀಡಿದ್ದು, ಖಾತೆಯಿಂದ ಹಣ ಖಾಲಿಯಾಗುವಲ್ಲಿ ಬ್ಯಾಂಕಿನಿಂದ ಯಾವುದೇ ತಪ್ಪು ಆಗಿದ್ದರೆ ಅದಕ್ಕೆ ಬ್ಯಾಂಕ್‌ ಹೊಣೆಗಾರನಾಗುವುದಿಲ್ಲ ಎಂದು ಅದು ಹೇಳಿದೆ.
ಈ ಪ್ರಕರಣದ ಹಿನ್ನೆಲೆ: ಏಪ್ರಿಲ್ 2, 2018 ರಂದು ಗುಜರಾತ್‌ನ ಅಮ್ರೆಲಿ ಜಿಲ್ಲೆಯ ನಿವೃತ್ತ ಶಿಕ್ಷಕಿ ಕುರ್ಜಿ ಜಾವಿಯಾಗೆ ಎಸ್‌ಬಿಐ ಮ್ಯಾನೇಜರ್ ಹೆಸರಿನಲ್ಲಿ ಅವರಿಗೆ ಯಾರದ್ದೋ ಫೋನ್ ಬಂದಿತ್ತು. ಎಟಿಎಂ ಪಿನ್ ಸೇರಿದಂತೆ ಎಲ್ಲ ಮಾಹಿತಿ ಕೇಳಿದ್ದರು. ಅದರಂತೆ ಇವರು ಕೊಟ್ಟಿದ್ದರು. ಪಿಂಚಣಿ ಹಣವು ಖಾತೆಗೆ ಬರುತ್ತಿದ್ದಂತೆ ಖಾತೆಯಿಂದ ಹಣ ಖಾಲಿ ಮಾಡಲಾಗಿತ್ತು. ಈ ಬಗ್ಗೆ ಶಿಕ್ಷಕಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ದೂರು ನೀಡಿದ್ದರು. ಎಸ್‌ಬಿಐ ಇದರಲ್ಲಿ ತನ್ನ ತಪ್ಪಿ ಇಲ್ಲ ಎಂದು ಹೇಳಿತ್ತು. ನಂತರ ಈ ಪ್ರಕರಣ ಸಿಡಿಆರ್‌ಸಿ ಮುಂದೆ ಬಂದಿತು.
ಈ ಬಗ್ಗೆ ವಿಚಾರಣೆ ನಡೆಸಿದ ನಂತರ ಇಡೀ ಪ್ರಕರಣದಲ್ಲಿ ಬ್ಯಾಂಕಿನ ಯಾವುದೇ ದೋಷವಿಲ್ಲ ಎಂದು ಹೇಳಿದೆ. ಆರ್‌ಬಿಐ ತನ್ನ ಬ್ಯಾಂಕ್ ಖಾತೆ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪದೇ ಪದೇ ಮನವಿ ಮಾಡುತ್ತಿದೆ. ಯಾವುದೇ ಮಾಹಿತಿಯನ್ನು ದೂರವಾಣಿ ಮೂಲಕ ಗ್ರಾಹಕರಿಂದ ತೆಗೆದುಕೊಳ್ಳಬಾರದು ಎಂದು ಆರ್‌ಬಿಐ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ.ಆದಾಗ್ಯೂ ಗ್ರಾಹಕರು ಇಂಥದ್ದನ್ನು ಮಾಡಿದರೆ ಅದಕ್ಕೆ ಬ್ಯಾಂಕ್‌ ಹೊಣೆಗಾರನಲ್ಲ. ಬ್ಯಾಂಕ್‌ನಿಂದಾಗಿ ಗ್ರಾಹಕರಿಗೆ ನಷ್ಟವಾದರೆ ಮಾತ್ರ ಅದು ಹೊಣೆಗಾರನಾಗಿರುತ್ತದೆ. ಈ ಪ್ರಕರಣದಲ್ಲಿ ಬ್ಯಾಂಕಿನಿಂದ ಗ್ರಾಹಕರಿಗೆ ನಷ್ಟವಾಗಿಲ್ಲ. ಗ್ರಾಹಕರು ಬ್ಯಾಂಕಿಗೆ ದೂರು ನೀಡುವ ಮೊದಲೇ ಅವರದ್ದೇ ತಪ್ಪಿನಿಂದ ಗ್ರಾಹಕರಿಗೆ ನಷ್ಟವಾಗಿದೆ. ಹೀಗಾಗಿ ಬ್ಯಾಂಕ್‌ ಇದಕ್ಕೆ ಜವಾಬ್ದಾರಿಯಲ್ಲ ಎಂದು ಸಿಡಿಆರ್‌ಸಿ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ದಿಢೀರ್ ಬಾಯ್ತೆರೆದ ರಸ್ತೆ : ಸೆಕೆಂಡೆಗಳಲ್ಲೇ ದೊಡ್ಡ ಟ್ಯಾಂಕರ್ ಅನ್ನೇ ಇಡಿಯಾಗಿ ನುಂಗಿದ ಗುಂಡಿ...!

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement