ಸಿಡಿ ಯುವತಿ ಮನೆ ಮೇಲೆ ಎಸ್ಐಟಿ ದಾಳಿ: 23 ಲಕ್ಷ ರೂ. ಪತ್ತೆ ?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ಆರ್​ಟಿ ನಗರದ ಮನೆ ಮೇಲೆ ಬುಧವಾರ ಎಸ್‌ಐಟಿ ತಂಡ ದಾಳಿ ಮಾಡಿ ರಾತ್ರಿ 10 ಗಂಟೆಯ ವರೆಗೂ ಮನೆ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ದಾಳಿ ವೇಳೆ ಯುವತಿ ಮನೆಯಲ್ಲಿ 23 ಲಕ್ಷ ರೂ. ಹಣ ಪತ್ತೆಯಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಕಟ್ಟಡದ ಮಾಲೀಕರನ್ನು ಪ್ರಶ್ನಿಸಿರುವ ಎಸ್‌ಐಟಿಗೆ ಯುವತಿ 3-4 ದಿನಗಳ ಹಿಂದೆ ಕರೆ ಮಾಡಿ ಕ್ಷಮೆ ಕೇಳಿದ್ದಳು ಎಂದು ಕಟ್ಟದ ಮಾಲೀಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪ್ರಕರಣದ ಕಿಂಗ್ ಪಿನ್ ಎನ್ನಲಾಗುತ್ತಿರುವ ಮಾಜಿ ಪತ್ರಕರ್ತ ನರೇಶ್ ಅವರ ಮಂಜುನಾಥ ನಗರ ನಿವಾಸದ ಮೇಲೂ ದಾಳಿ ನಡೆಸಲಾಗಿದ್ದು, ಈ ವೇಳೆ 18.5 ಲಕ್ಷ ರೂ ಮೌಲ್ಯದ ಚಿನ್ನ ಖರೀದಿಸಿದ ರಶೀದಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಉದ್ಯಮಿ ಓರ್ವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಿಡಿ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಆ ಉದ್ಯಮಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಈಗಾಗಲೇ ಆರೋಪಿಗಳ ಸಂಪರ್ಕದಲ್ಲಿದ್ದ 30ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಜಿ ಸಚಿವರ ವಿರುದ್ಧ ಸಿಡಿ ಪ್ರಕರಣದ ಬಗ್ಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕೆಲ ದಿನಗಳ ಬಳಿಕ ತಮ್ಮ ದೂರನ್ನು ವಾಪಸ್ಸು ಪಡೆದಿದ್ದರು. ಈ ಕುರಿತು ಎಸ್‌ಐಟಿ ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಬುಧವಾರ ಮಧ್ಯಾಹ್ನ ತಮ್ಮ ಹೇಳಿಕೆಯನ್ನು ಪ್ರಕರಣದ ತನಿಖಾಧಿಕಾರಿ ಧರ್ಮೆಂದ್ರ ಅವರಿಗೆ ಕಳಿಸಿರುವ ದಿನೇಶ್ ಕಲ್ಲಹಳ್ಳಿ, ತಮಗೆ ಸಿಡಿ ಸಿಕ್ಕಿದ್ದು ಹೇಗೆ, ಕೊಟ್ಟವರು ಯಾರು ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement