ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ

ಭಾರತದ ಸೇರಿದಂತೆ ವಿಶ್ವದೆಲ್ಲೆಡೆ ವಾಟ್ಸಾಫ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಡೌನ್ ಡಿಟೆಕ್ಟರ್ ವರದಿಯಂತೆ ಸಾವಿರಾರು ಮಂದಿ ವೆಬ್‌ ಹಾಗೂ ಮೊಬೈಲ್ ಅಪ್ಲಿಕೇಷನ್ ಎರಡರಲ್ಲೂ ಸಮರ್ಪಕವಾಗಿ ಸೇವೆ ಇಲ್ಲ ಎಂದು ದೂರಿದ್ದಾರೆ.
ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ, ಫೇಸ್‌ಬುಕ್‌ ಕೂಡ ಲೋಡಿಂಗ್ ಸಮಸ್ಯೆ ಎದುರಿಸುತ್ತಿದೆ.ಶುಕ್ರವಾರ ರಾತ್ರಿ ಭಾರತೀಯ ಕಾಲಮಾನ 10.55ರಿಂದ ವಿಶ್ವದೆಲ್ಲೆಡೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ನಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ.
ಭಾರತ ಸೇರಿ ವಿವಿಧ ರಾಷ್ಟ್ರಗಳ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ ಬಳಕೆದಾರರು ವ್ಯತ್ಯಯಗಳ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement