ಮಹಾರಾಷ್ಟ್ರದಲ್ಲಿ ಕೊವಿಡ್‌ ಕ್ರಮ: ಆರೋಗ್ಯ,ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಡೆ ಶೇ.೫೦ರಷ್ಟು ಮಾತ್ರ ಹಾಜರಾತಿ

ಮುಂಬೈ: ಹೆಚ್ಚುತ್ತಿರುವ ಕೊವಿಡ್‌ -19 ಪ್ರಕರಣಗಳ ಮಧ್ಯೆ ಮಹಾರಾಷ್ಟ್ರ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಹೊಸ ನಿಯಮಗಳ ಪ್ರಕಾರ, ಆರೋಗ್ಯ ಮತ್ತು ಅಗತ್ಯ ಸೇವೆಗಳಿಗೆ ಸಂಬಂಧಿಸಿದ್ದನ್ನು ಹೊರತು ಪಡಿಸಿ ಖಾಸಗಿ ಕಚೇರಿಗಳು 50 ಪ್ರತಿಶತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಉತ್ಪಾದನಾ ವಲಯವು ಮಾರ್ಚ್ 31 ರವರೆಗೆ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಆದೇಶ ಹೇಳಿದೆ.
ಪ್ರತಿಶತ 50ರಷ್ಟು ಸಾಮರ್ಥ್ಯದೊಂದಿಗೆ ನಾಟಕ ಚಿತ್ರಮಂದಿರಗಳು ಮತ್ತು ಸಭಾಂಗಣಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ಕೊವಿಡ್‌-19 ಪ್ರಕರಣಗಳ ಮಧ್ಯೆ ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆ ಕಚೇರಿಗಳ ಕಾರ್ಯನಿರ್ವಹಣೆಗೆ ಸಿಬ್ಬಂದಿ ಸಾಮರ್ಥ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಮಹಾರಾಷ್ಟ್ರದ ಅಘಾಡಿ ಸರ್ಕಾರ ಇಲಾಖೆ ಮತ್ತು ಕಚೇರಿ ಮುಖ್ಯಸ್ಥರನ್ನು ಕೇಳಿದೆ.

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement