ಗೃಹ ಸಚಿವ ದೇಶ್ಮುಖ್‌ ವಿರುದ್ಧ ಆರೋಪ ಗಂಭೀರ ಸ್ವರೂಪದ್ದು:ಶರದ್‌ ಪವಾರ್‌

ಮುಂಬೈ; ರಾಷ್ಟ್ರೀಯ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸುತ್ತಿದ್ದಾರೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಕಳಂಕಿತ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಗೃಹ ಸಚಿವ ಅನಿಲ ದೇಶ್ಮುಖ್ ‌ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ದೇಶಮುಖ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ ಎಂದು ಭಾನುವಾರ ಹೇಳಿದ್ದಾರೆ.
“ಆರೋಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧಿಕಾರವಾಗಿದೆ” ಎಂದು ಶರದ್‌ ಪವಾರ್‌ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಆಡಳಿತದಲ್ಲಿ ಸಂಪೂರ್ಣ ಗೌರವವನ್ನು ಹೊಂದಿರುವಂತಹ ಅಧಿಕಾರಿಯೊಬ್ಬರು ೀ ಬಗ್ಗೆ ಆಳವಾದ ವಿಚಾರಣೆ ನಡೆಸಬೇಕಾಗಿದೆ ಎಂದ ಅವರು, ಈ ಬಗ್ಗೆ ತನಿಖೆ ನಡೆಸಲು ಪ್ರಸಿದ್ಧ ಪೊಲೀಸ್ ಅಧಿಕಾರಿ ಜೂಲಿಯೊ ರಿಬೈರೊ ಹೆಸರನ್ನು ಸೂಚಿಸಿದರು.
ಆಂಟಿಲಿಯಾ ಬಾಂಬ್ ಹೆದರಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಿಂದ ಈಗ ಬಂಧಿಸಲ್ಪಟ್ಟಿರುವ ವಾಝೆ ಅವರನ್ನು ಪುನಃ ನೇಮಿಸುವುದು ಪರಮ್ ಬಿರ್ ಸಿಂಗ್ ಅವರ ನಿರ್ಧಾರ. ಇದು ಮುಖ್ಯಮಂತ್ರಿ ಅಥವಾ ಗೃಹ ಸಚಿವರದ್ದಲ್ಲ ಎಂದ ಅವರು,
16 ವರ್ಷಗಳ ನಂತರ ವಾಝೆ ಅವರನ್ನು ಪುನಃ ಸೇರಿಸಿಕೊಳ್ಳುವುದು ಮತ್ತು ಅವರಿಗೆ ಒಂದು ಪ್ರಮುಖ ಹುದ್ದೆಯನ್ನು ನೀಡುವುದು ಮುಂಬೈನ ಮಾಜಿ ಪೊಲೀಸ್ ಆಯುಕ್ತರು ತೆಗೆದುಕೊಂಡ ನಿರ್ಧಾರಗಳು. ಮತ್ತು ಸಿಂಗ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ ನಂತರ ಆರೋಪಗಳನ್ನು ಹೊರಿಸಲಾಗಿದೆ” ಎಂದೂ ಪವಾರ್ ಹೇಳಿದರು.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement