ನಾಯಿ ಬೇಟೆಗೆ ಬಂದ ಚಿರತೆ ಮನೆಯಲ್ಲಿ ಬಂಧಿ

ಉಡುಪಿ: ನಾಯಿ ಹಿಡಿಯಲು ಬಂದ ಚಿರತೆಯೊಂದು ಮನೆಯೊಳಗೆ ಪ್ರವೇಶಿಸಿ ತಾನೇ ಬಧಿಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡದಿದೆ.
ಬ್ರಹ್ಮಾವರ ಬಳಿಯ ನೈಲಾಡಿಯಲ್ಲಿ ಈ ಘಟನೆ ನಡೆದಿದೆ. ಚಿರತೆ ಕುಟುಂಬದ ಸಾಕು ನಾಯಿ ಹಿಡಿಯಲು ಹೊರಟಿತ್ತು, ಆದರೆ ಅದು ತಪ್ಪಿಸಿಕೊಂಡು ಮನೆಯೊಳಗೆ ಓಡಿ ಹೋಯಿತು.ಚಿರತೆಯೂ ನಾಯಿಯನ್ನು ಹಿಂಬಾಲಿಸಿತು.ಶಬ್ದದಿಂದಾಗಿ ಎಚ್ಚರಗೊಂಡ ಮನೆಯ ಮಾಲೀಕರು ನೋಡಿದರೆ ಮನೆಯೊಳಗೆ ಚಿರತೆ ನುಗ್ಗಿದೆ. ತಕ್ಷಣವೇ ಬುದ್ದಿ ಉಪಯೋಗಿಸಿದ ಅವರು ಮನೆಯೊಳಗೇ ಚಿರತೆಯನ್ನೂ ಬಾಗಿಲು ಹಾಕಿ ಕೂಡಿ ಹಾಕಿದರು.
ನಂತರ, ಅರಣ್ಯ ಇಲಾಖೆಗೆ ಮಾಹಿ ನೀಡಲಾಯಿತು. ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಚಿದಾನಂದಪ್ಪ ಅವರು ಉಪ-ವಿಭಾಗೀಯ ಅರಣ್ಯ ಅಧಿಕಾರಿ ಮಂಜುನಾಥ ನಾಯಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಟ್ಟಲ್ ನಾಯಕ್, ಶಿವು ಮತ್ತು ಸುದೀಪ್ ಶೆಟ್ಟಿ ಅವರನ್ನೊಳಗೊಂಡ ತಂಡವನ್ನು ಮುನ್ನಡೆಸಿದರು ಮತ್ತು ಚಿರತೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದರು.
ಒಂದೂವರೆ ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಚಿರತೆಯನ್ನು ಪಂಜರದೊಳಗೆ ಹೋಗುವಂತೆ ಮಾಡಲಾಯಿತು. ನಂತರ ಸೈಬಾರ್ಕಟ್ಟೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ನಂತರ ಮೀಸಲು ಅರಣ್ಯದಲ್ಲಿ ಬಿಡುಗಡೆ ಮಾಡಲಾಯಿತು..

ಪ್ರಮುಖ ಸುದ್ದಿ :-   ರಾಜ್ಯದ ಲೋಕಸಭೆ ಚುನಾವಣೆ 2ನೇ ಹಂತದಲ್ಲಿ ಶೇ.70.03 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ? ಇಲ್ಲಿದೆ ವಿವರ..

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement