ಮಧ್ಯಪ್ರದೇಶ: ಮೂರು ನಗರಗಳಲ್ಲಿ ಭಾನುವಾರ ಲಾಕ್‌ಡೌನ್‌ ಜಾರಿ

ಭೂಪಾಲ್: ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮೂರು ನಗರಗಳಲ್ಲಿ ಪ್ರತಿ ಭಾನುವಾರ ಲಾಕ್‌ಡೌನ್‌ ಜಾರಿ ಲಾಕ್‌ಡೌನ್‌ ಮಾಡಲಾಗಿದೆ.
ಭೂಪಾಲ್, ಇಂದೋರ್ ಮತ್ತು ಜಬಲ್ ಪುರದಲ್ಲಿ ಪ್ರತಿ ಭಾನುವಾರ ಲಾಕ್ ಡೌನ್ ಜಾರಿಯಾಗಿದ್ದು, ಭಾನುವಾರ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದು, ಬಣಗುಡುತ್ತಿವೆ.
ಈ ಮೂರು ನಗರಗಳಲ್ಲಿ ಪ್ರತಿ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿ ಮಧ್ಯಪ್ರದೇಶ ಸರ್ಕಾರ ಮಾರ್ಚ್ 19 ರಂದು ಆದೇಶ ಹೊರಡಿಸಿತ್ತು. ಶನಿವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಲಾಕ್ ಡೌನ್ ಇರಲಿದೆ.
ಭೂಪಾಲ್ ಮತ್ತು ಇಂದೋರ್ ನಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಬುಧವಾರದಿಂದಲೇ ರಾತ್ರಿ ಕರ್ಫ್ಯೂ ಈಗಾಗಲೇ ಜಾರಿಯಲ್ಲಿದೆ. ಅಗತ್ಯವಸ್ತುಗಳಾದ ಪ್ಯಾಕೆಜ್ಡ್ ಹಾಲು ಮಾರಾಟ ಕೇಂದ್ರ, ಪೆಂಟ್ರೋಲ್ ಪಂಪ್ ಗಳು ಕೂಡಾ ಮುಚ್ಚಲ್ಪಟ್ಟಿವೆ. ಕೇವಲ ಸ್ಥಳೀಯ ವ್ಯಾಪಾರಿಗಳು ಮಾತ್ರ ಬೆಳಗ್ಗೆ 10 ಗಂಟೆಯವರೆಗೂ ಮನೆಗಳಿಗೆ ಹಾಲು ಹಾಕಲು ಅವಕಾಶ ನೀಡಲಾಗಿದೆ. ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗಳು ತೆರೆದಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement