ಭಾರತದಲ್ಲಿ 46,951 ದೈನಂದಿನ ಕೊರೊನಾ ಸೋಂಕು…ಮಹಾರಾಷ್ಟ್ರವೇ ದೊಡ್ಡ ತಲೆನೋವು

ನವ ದೆಹಲಿ: ಭಾರತದಲ್ಲಿ ಕಳೆದ 24 ತಾಸಿನಲ್ಲಿ 46,951 ಹೊಸ ಕೊರೊನಾ ಸೋಂಕು ದಾಖಲಿಸಿದೆ.ಇದರಲ್ಲಿ 30,535 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಮತ್ತು 2,644 ಪ್ರಕರಣಗಳು ಪಂಜಾಬ್‌ನಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಜನವರಿ 12 ರಿಂದ ಮೊದಲ ಬಾರಿಗೆ ದೇಶಾದ್ಯಂತ ಸಾವುಗಳ ಸಂಖ್ಯೆ 200 ಅಂಕಿಗಳನ್ನು ದಾಟಿದ್ದು, 212 ಜನ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು ಈಗ 3.34 ಲಕ್ಷಕ್ಕೂ ಹೆಚ್ಚಕ್ಕೆ ತಲುಪಿದೆ.
ಭಾನುವಾರ, ಮಹಾರಾಷ್ಟ್ರದಲ್ಲಿ 30,535 ಹೊಸ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷದ ಮಾರ್ಚ್‌ನಿಂದ ಇದು ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 11.6 ಮಿಲಿಯನ್ ಮತ್ತು ಸಾವಿನ ಸಂಖ್ಯೆ 159,967ಕ್ಕೆ ಏರಿಕೆಕಂಡಿದೆ ಎಂದು ಆರೋಗ್ಯ ಸಚಿವಾಲಯದ ಡ್ಯಾಶ್ ಬೋರ್ಡ್ ನಲ್ಲಿ ವರದಿಯಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಭಾನುವಾರದವರೆಗೆ 23,44,45,774 ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 880,655 ಮಾದರಿಗಳನ್ನು ಒಂದೇ ದಿನ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಶೇ.83.14ರಷ್ಟು ಹೊಸ ಸೋಂಕುಗಳಿವೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ದೆಹಲಿಯಲ್ಲೂ ಎಚ್ಚರಿಕೆ ನೀಡಲಾಗಿದ್ದು, ಕಳೆದ ವಾರದಿಂದ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಸತತ ಎರಡನೇ ದಿನ ದೆಹಲಿಯಲ್ಲಿ ಭಾನುವಾರ 800 ಹೊಸ ಪ್ರಕರಣಗಳು ವರದಿಯಾಗಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಒಂದೇ ಮತಗಟ್ಟೆಯಲ್ಲಿ 8 ಸಲ ಮತದಾನ ಮಾಡಿದ ಯುವಕ ; ವೀಡಿಯೋ ವೈರಲ್ ಆದ ನಂತರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement