ಮಹಾರಾಷ್ಟ್ರದಲ್ಲಿ ಕೊಂಚ ಇಳಿಕೆ..ದೈನಂದಿನ ಕೊರೊನಾ ಪ್ರಕರಣ 24,645

ಮುಂಬೈ: ಮಹಾರಾಷ್ಟ್ರದಲ್ಲಿ ಸೋಮವಾರ (ಮಾರ್ಚ್ 22) 24,645 ಹೊಸ ಕೊವಿಡ್‌-19 ಪ್ರಕರಣಗಳು ದಾಖಲಾಗಿವೆ.
ರಾಜ್ಯವು ತನ್ನ ಅತಿದೊಡ್ಡ ಏಕದಿನ ಉಲ್ಬಣ (30,535) ವರದಿ ಮಾಡಿದ ಒಂದು ದಿನದ ನಂತರ ಸೋಮವಾರ ಸುಮಾರು ಆರು ಸಾವಿರ ದೈನಂದಿನ ಪ್ರಕರಣದಲ್ಲಿ ಇಳಿಕೆಯಾಗಿದೆ. ಮೂರು ದಿನಗಳ ನಂತರ ಇಳಿಕೆ ಕಂಡಿದೆ.58 ಕೊರೊನಾ ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 53,457 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 2.13%.
9,463 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ 89.22% ರಷ್ಟಿದೆ.
ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,15,241 ಆಗಿದೆ. ಮುಂಬೈ ವಲಯದಲ್ಲಿ – 6212, ನಾಸಿಕ್ ವಲಯದಲ್ಲಿ 3721, ಪುಣೆ ವಲಯದಲ್ಲಿ 4737, ಕೊಲ್ಲಾಪುರ ವಲಯದಲ್ಲಿ 249, ನಾಗ್ಪುರ ವಲಯದಲ್ಲಿ 4231 ಪ್ರಕರಣಗಳು ದಾಖಲಾಗಿವೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement