ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ, ೧೦, ೧೨ನೇ ಕ್ಲಾಸಿನವರು‌ ಮನೆ ಹತ್ತಿರದ ಕೇಂದ್ರದಲ್ಲೇ ಪರೀಕ್ಷೆ ಬರೆಯಬಹುದು

ನವ ದೆಹಲಿ : ಕೊವಿಡ್‌-೧೯ ಸಾಂಕ್ರಾಮಿಕ ರೋಗದ ನಡುವೆ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ೧೦ ಮತ್ತು ೧೨ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದೆ.
ಅವರು ತಮ್ಮ ಪರೀಕ್ಷಾ ಕೇಂದ್ರವನ್ನು ಬದಲಾಯಿಸುವ ಆಯ್ಕೆಯನ್ನು ಮಂಡಳಿ ನೀಡಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಮಾರ್ಚ್ 25ರೊಳಗೆ ತಮ್ಮ ಸ್ವಂತ ಶಾಲೆಗೆ ಮನವಿ ಸಲ್ಲಿಸಬಹುದು. ಆದರೆ, ಶಾಲೆಗಳು ಮಾರ್ಚ್ 31ರೊಳಗೆ ಸಿಬಿಎಸ್ ಇ ವೆಬ್ ಸೈಟ್ ನಲ್ಲಿ ಲಾಗ್ ಆನ್ ಆಗುವ ಮೂಲಕ ಈ ಕೋರಿಕೆ ಕಳುಹಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಹೆಚ್ಚುತ್ತಿರುವ ಕೊವಿಡ್‌ ಗಮನದಲ್ಲಿಟ್ಟು ಈ ವ್ಯವಸ್ಥೆ ಮಾಡಲಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಊರು ಅಥವಾ ರಾಜ್ಯಕ್ಕೆ ಮರಳಿದ್ದಾರೆ. ವಿದ್ಯಾರ್ಥಿಗಳು ಈ ಮೊದಲು ನೋಂದಾಯಿಸಿದ ಪರೀಕ್ಷಾ ಕೇಂದ್ರಗಳಿಗೆ ವಾಪಸ್ ತಲುಪಲು ಕಷ್ಟಸಾಧ್ಯ. ಆದ್ದರಿಂದ ಪರೀಕ್ಷಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಲಲಾಗಿದೆ ಎಂದು ಎಂದು ಮಂಡಳಿ ತಿಳಿಸಿದೆ.
ಒಂದು ನಗರದಲ್ಲಿ ಥಿಯರಿ ಪೇಪರ್ ಮತ್ತು ಪ್ರಾಯೋಗಿಕ ಕೇಂದ್ರದ ಸೌಲಭ್ಯ ಇರುತ್ತದೆ. ಎರಡೂ ಪರೀಕ್ಷೆಗಳಿಗೆ ಬೇರೆ ಬೇರೆ ನಗರಗಳನ್ನು ಬದಲಾಯಿಸಲು ಅವಕಾಶ ಇಲ್ಲ. ಅಭ್ಯರ್ಥಿಯ ಕೋರಿಕೆಯ ಮೇರೆಗೆ ಪರೀಕ್ಷಾ ಕೇಂದ್ರವನ್ನು ಅದೇ ನಗರ ಅಥವಾ ಸಮೀಪದ ಯಾವುದೇ ನಗರದಲ್ಲಿ ನಿಯೋಜಿಸಲಾಗುವುದು. ವಿದ್ಯಾರ್ಥಿಯು ತನ್ನ ಪರೀಕ್ಷಾ ಕೇಂದ್ರವನ್ನು ಪ್ರಾಯೋಗಿಕ ಪರೀಕ್ಷೆ ಮತ್ತು ಥಿಯರಿ ಪರೀಕ್ಷೆಗಾಗಿ ಬದಲಾಯಿಸಬಹುದು. ಈ ಕೇಂದ್ರವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲು ಸೂಚಿಸಿರುವ ಪರೀಕ್ಷಾ ಮಂಡಳಿಯು ಒಮ್ಮೆ ಪರೀಕ್ಷಾ ಕೇಂದ್ರ ಬದಲಾಯಿಸುವಂತೆ ಮನವಿ ಸ್ವೀಕರಿಸಿದರೆ, ಅದನ್ನು ಬದಲಿಸುವುದಿಲ್ಲ ಎಂದು ಹೇಳಿದೆ.
ಕೇಂದ್ರವನ್ನು ಬದಲಾಯಿಸುವ ಮೂಲಕ ತನ್ನ ಪರೀಕ್ಷೆಯನ್ನು ಬದಲಾಯಿಸುವ ಅಭ್ಯರ್ಥಿಯು, ತಮ್ಮ ಅಂಕಗಳನ್ನು ಅಪ್ ಲೋಡ್ ಮಾಡುವಾಗ ಶಾಲೆಯು ವರ್ಗಾವಣೆ (t) ಅನ್ನು ಬರೆಯುತ್ತದೆ. ಜೂನ್ 11ರೊಳಗೆ ಅಂತಹ ಪರೀಕ್ಷಾರ್ಥಿಗಳ ಅಂಕಗಳನ್ನು ಅಪ್ ಲೋಡ್ ಮಾಡುವಂತೆ ಸಿಬಿಎಸ್ ಇ ತನ್ನ ಎಲ್ಲ ಪ್ರಾದೇಶಿಕ ಪ್ರಾಧಿಕಾರಗಳಿಗೆ ಸೂಚಿಸಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement