ಬಾಂಗ್ಲಾದೇಶ: ನಿರಾಶ್ರಿತ ರೊಹಿಂಗ್ಯಾ ಕ್ಯಾಂಪ್‌ನಲ್ಲಿ ಅಗ್ನಿ ಅವಘಡ ೧೫ ಸಾವು

ಬಾಂಗ್ಲಾದೇಶದ ನಿರಾಶ್ರಿತರ ಕ್ಯಾಂಪ್‌ನಲ್ಲಿ ಬೆಂಕಿ ಅವಘಡದಲ್ಲಿ ರೋಹಿಂಗ್ಯಾಗಳ ಗುಡಿಸಲುಗಳು ಧ್ವಂಸಗೊಂಡಿದ್ದು, ೧೫ ಜನರು ಮೃತಪಟ್ಟಿದ್ದರೆ ೪೦೦ ಜನರು ಕಾಣೆಯಾಗಿದ್ದಾರೆ.
೨೦೧೭ರ ಮಿಲಿಟರಿ ದೌರ್ಜನ್ಯದಿಂದ ವಲಸೆ ಬಂದ ಒಂದು ಮಿಲಿಯನ್‌ ಮುಸಲ್ಮಾನರು ಇಲ್ಲಿ ೮೦೦೦ ಎಕರೆ ವ್ಯಾಪ್ತಿಯಲ್ಲಿ ವಿವಿಧ ಕ್ಯಾಂಪ್‌ಗಳಲ್ಲಿ ನೆಲೆಸಿದ್ದಾರೆ.
ಅಡುಗೆ ಅನಿಲ ಸಿಲೆಂಡರ್‌ ಸ್ಫೋಟದಿಂದ ದುರ್ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಭಯಭೀತರಾದ ಕುಟುಂಬಗಳು ತಾವು ಸಾಗಿಸಬಹುದಾದ ಸಾಮಗ್ರಿಗಳೊಂದಿಗೆ ಓಡಿಹೋದರು, ಸಹಸ್ರಾರು ಪೋಷಕರು ತಮ್ಮ ಮಕ್ಕಳಿಂದ ಬೇರ್ಪಟ್ಟರು. ಘಟನೆಯಲ್ಲಿ ಸುಮಾರು ೫೦೦ ಜನರು ಗಾಯಗೊಂಡಿದ್ದಾರೆ. ಕೆಲವರು ಕಾಲ್ಗತುಳಿತದಿಂದ ಗಾಯಗೊಂಡಿದ್ದಾರೆಂದು ವರದಿ ತಿಳಿಸಿದೆ.
ನೂರಾರು ಅಗ್ನಿಶಾಮಕ ದಳ ಮತ್ತು ನೆರವು ಕಾರ್ಯಕರ್ತರು ನಿರಾಶ್ರಿತರನ್ನು ರಕ್ಷಣೆಗೆ ಯತ್ನಿಸಿದರು. ರೋಹಿಂಗ್ಯಾ ನಾಯಕ ಸಯೀದ್ ಉಲ್ಲಾ ಕೂಡಲೇ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. “ಶಿಬಿರಗಳಲ್ಲಿ ಈ ಬೆಂಕಿ ಘಟನೆಗಳು ಏಕೆ ಪದೇ ಪದೇ ನಡೆಯುತ್ತಿವೆ ಎಂಬುದು ಸ್ಪಷ್ಟವಾಗಿಲ್ಲ. ಇದಕ್ಕೆ ಸರಿಯಾದ ತನಿಖೆ ಅಗತ್ಯ ಎಂದು ಅವರು ಹೇಳಿದರು.
ಬಾಂಗ್ಲಾ ಸರಕಾರ ನಿರಾಶ್ರಿತರನ್ನು ಬಂಗಾಳಕೊಲ್ಲಿಯ ದ್ವೀಪಕ್ಕೆ ಸ್ಥಳಾಂತರಿಸುತ್ತಿದ್ದು, ಈವರೆಗೆ ೧೩,೦೦೦ ರೊಹಿಂಗ್ಯಾಗಳನ್ನು ಸ್ಥಳಾಂತರಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement