ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಏಕದಿನದ ಕೊರೊನಾ ಸೋಂಕು ಬುಧವಾರ ದಾಖಲು..!..!

ಮುಂಬೈ: ಮಹಾರಾಷ್ಟ್ರದಲ್ಲಿ ಬುಧವಾರ (ಮಾರ್ಚ್ 24) 31,855 ಹೊಸ ಕೊವಿಡ್‌ -19 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಇದು ರಾಜ್ಯದ ಅತಿ ಹೆಚ್ಚು ಏಕದಿನದ ಕೊರೊನಾ ಉಲ್ಬಣವಾಗಿದೆ.
ಮೊದಲು ಇದೇ 21 ರ ಶನಿವಾರ ಏಕದಿನದ ಅತಿ ಹೆಚ್ಚು 30,535 ಪ್ರಕರಣಗಳು ದಾಖಲಾಗಿತ್ತು. ಅದಾದ ಮೂರು ದಿನಗಳ ನಂತರ ಈಗ ಅತಿ ಹೆಚ್ಚು ದೈನಂದಿನ ಉಲ್ಬಣ ಬುಧವಾರ ದಾಖಲಾಗಿದೆ.
95 ಕೊರೊನಾ ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 53,684 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 2.09%.
ಬುಧವಾರ 15,098 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣ 88.21% ರಷ್ಟಿದೆ.
ಮಹಾರಾಷ್ಟ್ರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,47,299.
ಮುಂಬೈ ವಲಯ ಬುಧವಾರ 9147 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಉಳಿದಂತೆ ನಾಸಿಕ್ ವಲಯದಲ್ಲಿ 4109,
ಪುಣೆ ವಲಯದಲ್ಲಿ 7562, ಕೊಲ್ಹಾಪುರ ವೃತ್ತದಲ್ಲಿ 271, ಔರಂಗಾಬಾದ್ ವೃತ್ತ 2301, ಲಾತೂರ್ ವೃತ್ತ 1872, ಅಕೋಲಾ ವೃತ್ತ 1760, ಮತ್ತು ನಾಗ್ಪುರ ವೃತ್ತದಲ್ಲಿ ಬುಧವಾರ 4833 ಪ್ರಕರಣಗಳು ದಾಖಲಾಗಿವೆ.
ಏತನ್ಮಧ್ಯೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಬುಧವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕೊವಿಡ್‌ -19 ಪ್ರಕರಣಗಳ ಹೆಚ್ಚಳ ತೀವ್ರ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement