
ನವದೆಹಲಿ: ಇನ್ನು ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ಗುಂಪುಗಳನ್ನು ಸಂಘ ಪರಿವಾರ ಎಂದು ಕರೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಅವರು ಟ್ವೀಟರ್‌ನಲ್ಲಿ, ಒಂದು ಪರಿವಾರವೆಂದರೆ ಅದರಲ್ಲಿ ಮಹಿಳೆಯರಿರುತ್ತಾರೆ. ಗೌರವಾನ್ವಿತ ಹಿರಿಯರ ಜೊತೆ ಸಹಾನುಭೂತಿ ಹಾಗೂ ವಾತ್ಸಲ್ಯದ ವಾತಾವರಣ ಇರುತ್ತದೆ. ಆದರೆ ಅದು ಸಂಘದ ಸಂಘಟನೆಗಳಲ್ಲಿ ಇಂಥ ವಾತಾವರಣ ಕಾಣುವುದಿಲ್ಲ. ಇನ್ನು ಮುಂದೆ ನಾನು ಸಂಘ ಪರಿವಾರದ ಸಂಘಟನೆಗಳನ್ನು ಸಂಘ ಪರಿವಾರ ಎಂದು ಕರೆಯುವುದಿಲ್ಲ ಎಂದು ತಿಳಿಸಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ