ಕೊವಿಡ್‌; ಸಾರ್ಕ್‌-ಸಿಒವಿ-2 ಮೇಲ್ಮೈ ಪ್ರೋಟೀನ್‌ಗಳ 5,600ಕ್ಕೂ ಹೆಚ್ಚು ರೂಪಾಂತರ…!

ಭೋಪಾಲ್: ಐಐಟಿ-ಇಂದೋರ್ ನಡೆಸಿದ ಅಧ್ಯಯನವು ವಿಶ್ವದ ಸಾರ್ಕ್‌-ಸಿಒವಿ-2 ಮೇಲ್ಮೈ ಪ್ರೋಟೀನ್‌ಗಳ 5,600 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು ಹೇಳಿದೆ.
ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಡಾ.ಹೆಮ್ ಚಂದ್ರ ಝಾ (ಐಐಟಿ-ಇಂದೋರ್‌ನ ಜೈವಿಕ ವಿಜ್ಞಾನ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ) ನೇತೃತ್ವದ ಸಂಶೋಧಕರ ತಂಡವು ಏಪ್ರಿಲ್ 2020 ಮತ್ತು ಸೆಪ್ಟೆಂಬರ್ 2020 ರ ನಡುವೆ ಈ ಅಧ್ಯಯನ ನಡೆಸಿತ್ತು.
ಅಧ್ಯಯನದ ಅವಧಿಯಲ್ಲಿ, ಜನವರಿ 2020 ಮತ್ತು ಜುಲೈ 2020 ರ ನಡುವೆ ವಿಶ್ವಾದ್ಯಂತ ವರದಿಯಾದ ಸುಮಾರು 21,000 ಅನುಕ್ರಮ ಫಲಿತಾಂಶಗಳನ್ನು(sequencing results) ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಈ ಅನುಕ್ರಮ ಫಲಿತಾಂಶಗಳನ್ನು ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (ಎನ್‌ಸಿಬಿಐ) ಸಂಶೋಧಕರು ಪಡೆದುಕೊಂಡಿದ್ದಾರೆ.
ಸೋಂಕಿತ ಆತಿಥೇಯ ಕೋಶದ ಮೇಲೆ ಸಾರ್ಕ್‌-ಸಿಒವಿ-2ನಲ್ಲಿನ ವಿವಿಧ ರೂಪಾಂತರಗಳ ಸಂಭವನೀಯ ಪರಿಣಾಮಗಳನ್ನು ಸಂಶೋಧನಾ ತಂಡವು ಮುಂದಿಡುತ್ತದೆ. ಅಧ್ಯಯನವು ಮುಖ್ಯವಾಗಿ ವೈರಸ್‌ನ ಮೇಲ್ಮೈಯಲ್ಲಿರುವ ಪ್ರೋಟೀನ್‌ಗಳ ರೂಪಾಂತರಗಳ ಮೇಲೆ ಕೇಂದ್ರೀಕರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಕೆಲವು ರೂಪಾಂತರಗಳ ಮೂಲದ ಸಮಯವನ್ನು ಅಧ್ಯಯನ ಮಾಡಲಾಗುತ್ತಿದೆ.
ಡಾ. ಝಾ ಪ್ರಕಾರ, ಸಾರ್ಕ್‌-ಸಿಒವಿ-2 ಮೂರು ಪ್ರಮುಖ ರೀತಿಯ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಹೊದಿಕೆ (ಇ), ಮೆಂಬ್ರೇನ್ (ಎಂ) ಮತ್ತು ಸ್ಪೈಕ್ (ಎಸ್) ಹೆಸರಿನಿಂದ ಗುರುತಿಸಲ್ಪಟ್ಟ ಈ ಒಂದು ಅಥವಾ ಹೆಚ್ಚಿನ ಪ್ರೋಟೀನ್‌ಗಳು ಕಾಲಾನಂತರದಲ್ಲಿ ಬದಲಾಗುತ್ತವೆ. ವಿಶ್ವಾದ್ಯಂತ ಒಟ್ಟು 21,000 ಪ್ರೋಟೀನ್ ಅನುಕ್ರಮಗಳನ್ನು ನಾವು ಅಧ್ಯಯನ ಮಾಡಿದ್ದೇವೆ. ಇದು ಬ್ರಿಟನ್‌, ಅಮೆರಿಕ, ಭಾರತ ಮತ್ತು ಇತರ ದೇಶಗಳಿಂದ ಜನವರಿ 2020 ಮತ್ತು ಜುಲೈ 2020 ರ ನಡುವೆ ತೆಗೆದುಕೊಂಡ ಮಾದರಿಗಳನ್ನು ಒಳಗೊಂಡಿದೆ.
“ನಮ್ಮ ಸಂಶೋಧನೆಯಲ್ಲಿ ಈವರೆಗೆ ಒಟ್ಟು 5,647 ರೂಪಾಂತರಗಳು ಕಂಡುಬಂದಿವೆ. ಇ ಪ್ರೋಟೀನ್‌ನ 42 ರೂಪಾಂತರಿತ ರೂಪಗಳು, ಎಂ ನ 156 ರೂಪಾಂತರಿತ ರೂಪಗಳು ಮತ್ತು ಎಸ್ ಪ್ರೋಟೀನ್‌ನ 5449 ರೂಪಾಂತರಿತ ರೂಪಗಳನ್ನು ಅಧ್ಯಯನದಲ್ಲಿ ಗುರುತಿಸಲಾಗಿದೆ. ಎಸ್ ಪ್ರೋಟೀನ್‌ನಲ್ಲಿ ರೂಪಾಂತರಗಳು ಹೆಚ್ಚು ಎಂಬುದು ಸ್ಪಷ್ಟವಾಗಿದೆ. ವೈರಸ್ಸಿನ ಹೊರಗಿನ ಕವಚದಲ್ಲಿ ಮುಳ್ಳಿನಂತೆ ಕಾಣುವ ಪ್ರೋಟೀನ್‌ಗಳನ್ನು ಎಸ್ ಪ್ರೋಟೀನ್ ಎಂದು ಕರೆಯಲಾಗುತ್ತದೆ. ರೂಪಾಂತರಿತವು ಅದರ ಪ್ರೋಟೀನ್ ಅನ್ನು ಬದಲಾಯಿಸಿದಾಗ, ಅದರ ಬಂಧಿಸುವ ಸಾಮರ್ಥ್ಯವೂ ಬದಲಾಗುತ್ತದೆ. ಅದಕ್ಕಾಗಿಯೇ ಪ್ರತಿ ರೂಪಾಂತರ ವೈರಸ್ ಹೋಸ್ಟ್ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ವೈರಸ್ಸಿನ ಪ್ರೋಟೀನ್ ಮಾನವ ದೇಹದಲ್ಲಿ ಕಂಡುಬರುವ ಎಸಿಇ -2 ರಿಸೆಪ್ಟರ್‌ (receptor) ಅನ್ನು ಬಂಧಿಸುತ್ತದೆ ಮತ್ತು ಜನರಿಗೆ ಸೋಂಕು ತರುತ್ತದೆ. ”
ಎಸ್ ಪ್ರೋಟೀನ್ (ಸ್ಪೈಕ್ ಪ್ರೋಟೀನ್) ಮೂಲಕ ಮಾತ್ರ ಮಾರಕ ವೈರಲ್ ಸೋಂಕು ಮಾನವ ದೇಹಕ್ಕೆ ಪ್ರವೇಶಿಸುತ್ತದೆ ಮತ್ತು ಪ್ರಸ್ತುತ ಸಂಭವಿಸುತ್ತಿರುವ ವೈರಸ್‌ನ ವಿಭಿನ್ನ ಮಾರ್ಪಾಡುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವೈರಸ್ಸಿನ ಪ್ರೋಟೀನ್‌ ನಲ್ಲಿನ ಬದಲಾವಣೆಯು ವೈರಸ್ಸಿನ ಗುಣಲಕ್ಷಣಗಳನ್ನು ಬದಲಾಯಿಸುತ್ತದೆ. ಈ ಪ್ರೋಟೀನ್ನಿನ ಬಂಧನ ಬದಲಾದಾಗ ಮಾತ್ರ, ವೈರಸ್ಸಿನ ಉಲ್ಬಣ ಮತ್ತು ಅದರ ಪರಿಣಾಮ ಬದಲಾಗುತ್ತದೆ. ಭಾರತೀಯ ಜನಸಂಖ್ಯೆಯಲ್ಲಿ ಈ ರೂಪಾಂತರಗಳು ಕಂಡುಬರುವ ಸಾಕಷ್ಟು ಅವಕಾಶಗಳಿವೆ ಎಂದು ಈ ಅಧ್ಯಯನ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement