ಯುವತಿಯದ್ದು ಎನ್ನಲಾದ ಆಡಿಯೋ ವೈರಲ್‌.. ಡಿಕೆಶಿ ಹೆಸರು ಪ್ರಸ್ತಾಪ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಿಡಿ ರಾದ್ದಾಂತ ಪ್ರಕರಣ ಘಳಿಗೆಗೊಂದು ತಿರುವು ತೆಗೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ಶುಕ್ರವಾರ ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ.
ಆಡಿಯೋದಲ್ಲಿ ಯುವತಿಯು ಸಹೋದರ ಮತ್ತು ತಾಯಿ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿದ್ದು, ಯುವತಿಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿರುವುದು ಮತ್ತೊಂದು ತಿರುವು ಪಡೆದುಕೊಂಡಿದೆ.
ಸಂತ್ರಸ್ತ ಯುವತಿ ಗೆಳೆಯ ಆಕಾಶ್ ಜೊತೆಗಿದ್ದ ವೇಳೆಯಲ್ಲಿ ಅವಳು ತನ್ನ ತಮ್ಮನ ಜೊತೆ ಮಾತನಾಡಿದ್ದಾಳೆ ಎನ್ನವ 6 ನಿಮಿಷ 59 ಸೆಕೆಂಡ್ ಗಳ ಆಡಿಯೋ ಹೊರಬಿದ್ದಿದೆ. ಈ ಆಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಆಡಿಯೋ ತುಣಕಿನಲ್ಲಿ ಮೂರು ಬಾರಿ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ. ಯುವತಿಯ ತಮ್ಮ ನಿನಗೆ ಇದೆಲ್ಲಾ ಬೇಕಿತ್ತಾ. ಅವರೆಲ್ಲಾ ದೊಡ್ಡವರು ಅವರನ್ನು ಎದುರು ಹಾಕಿಕೊಳ್ಳಬೇಕಿತ್ತಾ ಎಂದು ಪ್ರಶ್ನಿಸುತ್ತಾನೆ. ಆಗ ಅದಕ್ಕೆ ಉತ್ತರಿಸಿದ ಯುವತಿ  ಡಿ.ಕೆ. ಶಿವಕುಮಾರ ಕಡೆಯವರೇ ಬರುತ್ತಾರೆ ಎಂದು ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.ಯುವತಿಯ ಸಂಭಾಷಣೆಯದ್ದು ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾಳೆ ಇದಕ್ಕಿಂತ ದೊಡ್ಡ ಬಾಂಬ್ ಸ್ಫೋಟವಾಗಲಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

 

 

5 / 5. 2

ಶೇರ್ ಮಾಡಿ :

  1. geek

    ಆಡಿಯೋ ಕ್ಲಿಪ್ ಆದರೆ ಅದು ಬಿಜೆಪಿ ಐಟಿ ಸೆಲ್ ನವರು ಸೃಷ್ಟಿಸಿ ಬಿಡುಗಡೆ ಮಾಡಿರುವ ಸಾಧ್ಯತೆಯೂ ಇದೆ. ಇಂತಹ ಹಲವು ಆಡಿಯೋಗಳನ್ನು ಸೃಷ್ಟಸಿ ಬಿಡುಗಡೆ ಮಾಡಿರುವ ನಿದರ್ಶನಗಳು ಇವೆ. ಹಿಂದೆ ಕೋಮುವಾದ ಬೆಳೆಸಲು ಬಳಕೆಯಾಗುತ್ತಿದ್ದ ಐಟಿ ಸೆಲ್ ಇದೀಗ ಇಂತಹ ಕೆಲಸಕ್ಕೂ ಇಳಿದಿರುವ ಸಾಧ್ಯತೆಗಳಿವೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement