ಭಾರತದಲ್ಲಿ ಸಂಬಳ ಪಡೆಯುವ ಎಷ್ಟು ಜನರು ಅಲ್ಟ್ರಾ-ರಿಚ್ ಕ್ಲಬ್‌ಗೆ ಸೇರಿದ್ದಾರೆ..?

ನವ ದೆಹಲಿ: ಭಾರತದ ಕನಿಷ್ಠ 14% ರಷ್ಟು ನಿವ್ವಳ ಮೌಲ್ಯದ ವ್ಯಕ್ತಿಗಳು (ultra-high net worth individuals) ಸಂಬಳ ಪಡೆಯುವ ನೌಕರರ ವಿಭಾಗದವರು ಎಂದು ನೈಟ್ ಫ್ರಾಂಕ್ ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಇದರೊಂದಿಗೆ, ಅಲ್ಟ್ರಾ-ಶ್ರೀಮಂತ ಕ್ಲಬ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಏಷ್ಯಾ ಪೆಸಿಫಿಕ್‌ನಲ್ಲಿ ಭಾರತ ನಾಲ್ಕನೇ ಅತಿ ಹೆಚ್ಚು ಕೊಡುಗೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತಾರಾಷ್ಟ್ರೀಯ ಆಸ್ತಿ ಸಲಹೆಗಾರರಾದ ನೈಟ್ ಫ್ರಾಂಕ್ ಇತ್ತೀಚೆಗೆ ‘ಆಟಿಟ್ಯೂಡ್ಸ್ ಸರ್ವೆ 2021’ ಎಂಬ ಸಮೀಕ್ಷೆ ಪ್ರಕಟಿಸಿದ್ದಾರೆ.
ಸಮೀಕ್ಷೆಯ ಪ್ರಕಾರ, ಸುಮಾರು 56% ರಷ್ಟು ಅತಿ ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳು ತಮ್ಮ ಸಂಪತ್ತನ್ನು ತಮ್ಮ ಸ್ವಂತ ವ್ಯವಹಾರಗಳ ಮೂಲಕ ಪಡೆಯುತ್ತಾರೆ. ಕನಿಷ್ಠ 14% ಭಾರತೀಯರು ಹೂಡಿಕೆ ಬಂಡವಾಳದಿಂದ ಸಂಪತ್ತನ್ನು ಪಡೆಯುತ್ತಾರೆ ಎಂದು ಸಮೀಕ್ಷೆ ಉಲ್ಲೇಖಿಸಿದೆ.
ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್, “ಈಗ ಭಾರತದಲ್ಲಿ ಯುಹೆಚ್‌ಎನ್‌ಡಬ್ಲ್ಯುಐ ಪಟ್ಟಿಯಲ್ಲಿ ಜಾಗ ಪಡೆದಿರುವ ಸಂಬಳ ಪಡೆಯುವ ನೌಕರರ ಸಂಖ್ಯೆಯಲ್ಲಿನ ಹೆಚ್ಚಳವು ಪ್ರಾದೇಶಿಕ ಮತ್ತು ಜಾಗತಿಕ ಆರ್ಥಿಕತೆ ಹಾಗೂ
ಭಾರತದ ಪ್ರಮುಖ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಭಾರತವು ಹೆಚ್ಚಿನ ದೇಶಗಳಿಗೆ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ, ಭಾರತದ ಪ್ರಮುಖ ಸಂಘ-ಸಂಸ್ಥೆಗಳ ಉಪಸ್ಥಿತಿಯನ್ನು ನಾವು ನೋಡಿದ್ದೇವೆ. ಗಮನಾರ್ಹವಾಗಿ, ಭಾರತೀಯರು ವಿಶ್ವದಾದ್ಯಂತದ ಪ್ರಮುಖ ಕಾರ್ಯನಿರ್ವಾಹಕ ಹುದ್ದೆಗಳ ಪ್ರಬಲ ಸ್ಪರ್ಧಿಗಳಾಗಿದ್ದು, ಉತ್ತಮ ಗುಣಮಟ್ಟದ ಮಾನವಶಕ್ತಿಯಿಂದಾಗಿ ಇದು ಸಂಬಳದ ವಿಭಾಗದ ಏರಿಕೆಗೆ ಕಾರಣವಾಗಿದೆ ನೈಟ್ ಫ್ರಾಂಕ್ ಉಲ್ಲೇಖಿಸಿದೆ.
ವರದಿಯ ಪ್ರಕಾರ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ, ಸಿಂಗಾಪುರವು ಅತಿ ಹೆಚ್ಚು ಸಂಬಳ ಪಡೆಯುವ ಯುಹೆಚ್‌ಎನ್‌ಡಬ್ಲ್ಯುಐಗಳನ್ನು ಹೊಂದಿದ್ದು, 31% ರಷ್ಟು ಅತಿ ಶ್ರೀಮಂತ ಉದ್ಯೋಗಿಗಳಾಗಿದ್ದು, ಫಿಲಿಪೈನ್ಸ್ (18%), ಚೀನೀ ಮುಖ್ಯಭೂಮಿ (16%), ಭಾರತ (14%) ಮತ್ತು ಹಾಂಗ್ ಕಾಂಗ್ 13%) ಇವೆ.
ಜಾಗತಿಕವಾಗಿಯೂ ಸಿಂಗಾಪುರ ತನ್ನ ಮುನ್ನಡೆ ಕಾಯ್ದುಕೊಂಡಿದೆ, ದಕ್ಷಿಣ ಆಫ್ರಿಕಾ (28%), ರಷ್ಯಾ (25%), ಕೆನಡಾ (22%) ಮತ್ತು ಸ್ವಿಟ್ಜರ್ಲೆಂಡ್ (22%) ನಂತರದ ಸ್ಥಾನದಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ.
ವ್ಯವಹಾರಗಳು ತಮ್ಮ ದಕ್ಷತೆ ಸುಧಾರಿಸಲು ಪ್ರಯತ್ನಿಸುತ್ತಿರುವುದರಿಂದ ಈ ವಿದ್ಯಮಾನವು ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ; ಹೆಚ್ಚಿನ ಸಂಭಾವನೆ ಪಡೆಯುವ ವಿಶೇಷ ಉದ್ಯೋಗಗಳಲ್ಲಿ ಬೆಳವಣಿಗೆ ಕಂಡುಬರುತ್ತದೆ, ಅದು ಕ್ಲಬ್‌ಗೆ ಹೆಚ್ಚಿನ ಕೊಡುಗೆ ನೀಡಲು ಸಹಾಯ ಮಾಡುತ್ತದೆ” ಎಂದು ನೈಟ್ ಫ್ರಾಂಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಿಕಪ್ ವಾಹನ ಪಲ್ಟಿಯಾಗಿ 18 ಮಂದಿ ಸಾವು, ನಾಲ್ವರಿಗೆ ಗಾಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement