ಕೊರಗಜ್ಜ ದೈವಸ್ಥಾನ ಅಪವಿತ್ರಗೊಳಿಸಿದವರಲ್ಲಿ ಒಬ್ಬನ ಸಾವು: ಹೆದರಿ ಇನ್ನಿಬ್ಬರು ಸ್ವಯಂ ತಪ್ಪೊಪ್ಪಿಗೆ…!

ಮಂಗಳೂರು; ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿ ಹೊಂದಿದೆ ಎನ್ನುವುದು ನಂಬಿಕೆ. ಈ ನಂಬಿಕೆಗೆ ಪುಷ್ಟಿ ನೀಡುವಂತಹ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ದೈವಸ್ಥಾನಗಳಿಗೆ ಅಪಚಾರ ಮಾಡಿದ ವ್ಯಕ್ತಿಯೊಬ್ಬ ಸತ್ತಿದ್ದು, ಈ ಕೃತ್ಯಕ್ಕೆ ಸಹಕರಿಸಿದ ಇಬ್ಬರು ದೈವಗಳ ಮುಂದೆ ಶರಣಾಗಿದ್ದಾರೆ.
ಮಂಗಳೂರು ನಗರ ಭಾಗದಲ್ಲೇ ದುಷ್ಕರ್ಮಿಗಳು ದೈವಸ್ಥಾನಕ್ಕೆ ಅಪಚಾರ ಎಸಗುತ್ತಿದ್ದರು. ಕಾರಣಿಕ ದೈವ ಕೊರಗಜ್ಜನ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಅಶ್ಲೀಲ ಬರಹಗಳ ಚೀಟಿ ಹಾಕಿ ಅಪವಿತ್ರಗೊಳಿಸಿದ್ದರು. ಈ ಬಗ್ಗೆ ನಾಲ್ಕೈದು ಪ್ರಕರಣ ದಾಖಲಾಗಿತ್ತು.ಈ ರೀತಿ ದುಷ್ಕೃತ್ಯ ಎಸಗಿದ ತಂಡ ಇದೀಗ ಸಂಕಷ್ಟಕ್ಕೆ ಒಳಗಾಗಿ ದೈವಗಳಿಗೆ ಶರಣಾಗಿದ್ದಾರೆ. ತಂಡದ ಓರ್ವ ವ್ಯಕ್ತಿ ಮೃತಪಟ್ಟ ಬಳಿಕ ಮತ್ತಿಬ್ಬರು ಹೆದರಿ ದೈವಗಳಿಗೆ ತಪ್ಪು ಕಾಣಿಕೆ ಹಾಕಲು ಬಂದು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಬಂಧನಕ್ಕೆ ಒಳಗಾಗಿರುವವರ ಹೆಸರು ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್. ಇವರಿಬ್ಬರು ಸಹ ಮಂಗಳೂರು ಹೊರವಲಯದ ಜೋಕಟ್ಟೆ ನಿವಾಸಿಗಳು. ಇವರಿಬ್ಬರು ಹಾಗು ಇವರ ಸ್ನೇಹಿತ ನವಾಝ್ ಸೇರಿ ಕಾರಣಿಕ ದೈವ ಕೊರಗಜ್ಜನ ದೈವಸ್ಥಾನದ ಕಾಣಿಕೆ ಹುಂಡಿಗೆ ಇದೇ ರೀತಿ ಆಕ್ಷೇಪಾರ್ಹ ವಸ್ತುಗಳನ್ನು ಹಾಕಿಅಪಚಾರ ಎಸಗಿದ್ದರು. ಪೊಲೀಸರಿಗೆ ಆರೋಪಿಗಳ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ನವಾಝ್ ತನ್ನನ್ನು ತಾನೂ ಮಂತ್ರವಾದಿ ಎಂಬಂತೆ ಬಿಂಬಿಸಿಕೊಂಡಿದ್ದ. ಈ ಕೃತ್ಯ ಎಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ. ರಕ್ತವಾಂತಿ, ಭೇದಿಯಿಂದ ಕಂಗೆಟ್ಟಿದ್ದ. ಈ ಸಂದರ್ಭ ತಾನು ಕಾರಣಿಕ ದೈವ ಕೊರಗಜ್ಜನ ಶಾಪಕ್ಕೆ ಗುರಿಯಾಗಿರುವ ಬಗ್ಗೆ ಉಳಿದಿಬ್ಬರಲ್ಲಿ ಹೇಳಿಕೊಂಡಿದ್ದ. ಇದಾದ ಕೆಲ ತಿಂಗಳ ಬಳಿಕ ಮೃತಪಟ್ಟಿದ್ದ. ನವಾಝ್ ಮೃತಪಟ್ಟ ಬಳಿಕ ತೌಫಿಕ್‌ಗೆ ಅನಾರೋಗ್ಯ ಕಾಡಿತು. ಇದರಿಂದ ಕಂಗೆಟ್ಟ ತೌಫಿಕ್ ಮತ್ತು ರಹೀಂ ಚಾಮುಂಡಿ ದೈವದಲ್ಲಿ ಪ್ರಶ್ನೆ ಕೇಳಿದ್ದರು. ಈ ಸಂದರ್ಭ ಎಮ್ಮೆಕೆರೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವಂತೆ ತಿಳಿಸಲಾಗಿತ್ತು. ಅದರಂತೆ ತಾವು ಕೃತ್ಯ ಎಸಗಿದ್ದ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂದು ಕೊರಗಜ್ಜನ ಮುಂದೆಯೇ ತಪ್ಪು ಕಾಣಿಕೆ ಹಾಕಲು ಬಂದಾಗ ಇವರು ಮಾಡಿದ ಕೃತ್ಯ ಬೆಳಕಿಗೆ ಬಂದಿದೆ.
ಸದ್ಯ ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮಾಡಿದ ತಪ್ಪಿಗೆ ಇದೀಗ ದೈವವೇ ಶಿಕ್ಷೆ ನೀಡಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 6

ಶೇರ್ ಮಾಡಿ :

  1. Geek

    ಆದರೆ ಮೃತಪಟ್ಟವನಿಗೆ ಕಳೆದ ಒಂದೂವರೆ ವರ್ಷದಿಂದ ಏಡ್ಸ್ ಇತ್ತು ಮತ್ತು ಹಾಸಿಗೆ ಹಿಡಿದಿದ್ದ. ಅಂತವನು ಕೊರಗಜ್ಜನ ದೇವಸ್ಥಾನಕ್ಕೆ 3 ತಿಂಗಳ ಹಿಂದೆ ಕೊರಗಜ್ಜನ ದೇವಸ್ಥಾನಕ್ಕೆ ಹೋಗಿ ಅವಾಚ್ಯ ಪದಗಳಿಂದ ಬೈದು ಬರೆದಿದ್ದ ಮತ್ತು ಅಪಚಾರ ಮಾಡಿದ್ದ ಎನ್ನುವುದರ ಬಗ್ಗೆ ಸಂದೇಹಗಳು ಮೂಡುತ್ತವೆ. ಅವನು ರಕ್ತಕಾರಿ ಸತ್ತಿದ್ದು ದೀರ್ಘಕಾಲ ಏಡ್ಸ್ ನಿಂದ ಬಳಲಿದ್ದರಿಂದ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆಯಲ್ಲ.

ನಿಮ್ಮ ಕಾಮೆಂಟ್ ಬರೆಯಿರಿ

advertisement