ಭಾರತದಲ್ಲಿ 72 ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ.. ಒಂದೇ ದಿನ 31 ಸಾವಿರ ದಾಟಿದ ಪ್ರಕರಣಗಳ ಜಿಗಿತ..!

ಕಳೆದ 24 ಗಂಟೆಗಳಲ್ಲಿ ಭಾರತವು 72,330 ಹೊಸ ಕೊರೊನಾ ವೈರಸ್ (ಕೋವಿಡ್ -19) ಪ್ರಕರಣಗಳನ್ನು ದಾಖಲಿಸಿದೆ.
ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ಬೆಳಿಗ್ಗೆ ತೋರಿಸಿದೆ.
ಈ ಸೋಂಕಿನಿಂದ 459 ಜನರ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ 354 ಮೃತಪಟ್ಟಿದ್ದರು. ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ. ರಾಷ್ಟ್ರವ್ಯಾಪಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,22,21,665 ಕ್ಕೆ ತಲುಪಿದೆ. ಮೃತಪಟ್ಟವರ ಸಂಖ್ಯೆ 1,62,927 ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕಳೆದ 24 ಗಂಟೆಗಳಲ್ಲಿ ಅಂದರೆ ಒಂದೇ ದಿನ 31,489 ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,84,055ಕ್ಕೆ ತಲುಪಿದೆ.
ಮಾರ್ಚ್ 31 ರವರೆಗೆ ಕೋವಿಡ್ -19 ಗಾಗಿ ಒಟ್ಟು 24,47,98,621 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಪೈಕಿ 11,25,681 ಮಾದರಿಗಳನ್ನು ಬುಧವಾರ ಪರೀಕ್ಷಿಸಲಾಯಿತು.
ಕಳೆದ ಕೆಲವು ವಾರಗಳಲ್ಲಿ, ಭಾರತವು ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ದಾಖಲಿಸುತ್ತಿದೆ, ಇದನ್ನು ತಜ್ಞರು ಸೋಂಕಿನ ಎರಡನೇ ಅಲೆ ಎಂದು ಕರೆದಿದ್ದಾರೆ. ಪರಿಸ್ಥಿತಿ ಕೆಟ್ಟದರಿಂದ ಇನ್ನೂ ಕೆಟ್ಟದ್ದಕ್ಕೆ ತಿರುಗುತ್ತಿದೆ ಎಂದು ಕೇಂದ್ರ ಹೇಳಿದೆ.
ದೇಶದಲ್ಲಿ ದಾಖಲಾದ ಕೋವಿಡ್ -19 ಪ್ರಕರಣಗಳಲ್ಲಿ ಶೇಕಡಾ 84.73 ಪ್ರಕರಣಗಳು ಎಂಟು ರಾಜ್ಯಗಳಲ್ಲಿವೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಮಹಾರಾಷ್ಟ್ರವು ದಿನನಿತ್ಯದ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ಹೇಳಿದೆ.
24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 39,544 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಬುಧವಾರ ಸಂಜೆ ತಿಳಿಸಿವೆ.
ದೆಹಲಿ ಆರೋಗ್ಯ ಇಲಾಖೆಯ ಪ್ರಕಾರ, ರಾಷ್ಟ್ರ ರಾಜಧಾನಿ 1,819 ಹೊಸ ಕಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು ಮತ್ತು 11 ಸಾವುಗಳನ್ನು ವರದಿ ಮಾಡಿದೆ. ದೆಹಲಿಯಲ್ಲಿ 8,838 ಸಕ್ರಿಯ ಪ್ರಕರಣಗಳಿವೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement