ಮಹಾರಾಷ್ಟ್ರದಲ್ಲಿ 48 ಸಾವಿರದ ಸಮೀಪ ಬಂದ ದೈನಂದಿನ ಕೊರೊನಾ ಪ್ರಕರಣ..!

ಮುಂಬೈ; ಮಹಾರಾಷ್ಟ್ರವು ಶುಕ್ರವಾರ 47827 ಹೊಸ ಕೊವಿಡ್‌ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ಗರಿಷ್ಠ ದೈನಂದಿನ ಪ್ರಕರಣವಾಗಿದೆ..!
ಹೊಸ ಅಂಕಿ ಅಂಶವು ರಾಜ್ಯದ ಸಕಾರಾತ್ಮಕ ಪ್ರಕರಣಗಳನ್ನು 2904076 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.
ರಾಜ್ಯದಲ್ಲಿ ಶನಿವಾರ 202 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 55379 ಕ್ಕೆ ತಲುಪಿದೆ ಎಂದು ಇಲಾಖೆ ಹೇಳಿದೆ.
24,126 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ 84.62%.
ರಾಜ್ಯದಲ್ಲಿ 3,89,832 ಸಕ್ರಿಯ ಪ್ರಕರಣಗಳಿವೆ.
8,832 ಹೊಸ ಕೊರೊನಾ ಪ್ರಕರಣಗಳೊಂದಿಗೆ ಮುಂಬೈ ಅತಿ ಹೆಚ್ಚು ಏಕದಿನ ಏರಿಕೆ ದಾಖಲಿಸಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

ನಿಮ್ಮ ಕಾಮೆಂಟ್ ಬರೆಯಿರಿ

advertisement