ಕರ್ನಾಟಕದಲ್ಲಿ ಆರು ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ..!

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರವೂ ಕೊರೊನಾ ದೈನಂದಿನ ಸೋಂಕಿನಲ್ಲಿ ಭಾರೀ ಹೆಚ್ಚಳವಾಗಿದೆ. ಮಂಗಳವಾರ ಒಂದೇ ದಿನ 6150 ಜನರಿಗೆ ಸೋಂಕು ತಗುಲಿದ ಬಗ್ಗೆ ವರದಿಯಾಗಿದೆ.
ಒಂದೇ ದಿನ ಇವತ್ತು ಒಂದೇ ದಿನ 39 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,26,584 ಕ್ಕೆ ಏರಿಕೆಯಾಗಿದೆ. ಒಂದೇ ದಿನ 3487 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,68,762 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಂದೇ ದಿನ 39 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಮೃತಪಟಟವರ ಸಂಖ್ಯೆ 12,696ಕ್ಕೆ ಏರಿದೆ
ರಾಜ್ಯದಲ್ಲಿ ಒಟ್ಟು 45,107 ಸಕ್ರಿಯ ಪ್ರಕರಣಗಳಿದ್ದು 351 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ನಾಲ್ಕು ಸಾವಿರದ ಮೇಲೆ ಕೊರೊನಾ ದೈನಂದಿನ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 4266 ಜನರಿಗೆ ಸೋಂಕು ತಗಲಿದೆ. 26 ಜನ ಸೋಂಕಿತರು ಮೃತಪಟ್ಟಿದ್ದಾರೆ. 32605 ಸಕ್ರಿಯ ಪ್ರಕರಣಗಳು ಇವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement