ಕುಡಿದ ಅಮಲಿನಲ್ಲಿ ಮನೆಗೆ ಬೆಂಕಿ ಹಚ್ಚಿ 7 ಜನರ ದಹನ ಮಾಡಿದ್ದ ಆರೋಪಿ ಶವವಾಗಿ ಪತ್ತೆ..!

posted in: ರಾಜ್ಯ | 0

ಮಡಿಕೇರಿ: ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಲ್ವರು ಮಕ್ಕಳು ಸೇರಿದಂತೆ 7 ಜನರ ಸಾವಿಗೆ ಕಾರಣನಾಗಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ನಂತರ ನಾಪತ್ತೆಯಾಗಿದ್ದ ಆರೋಪಿ ಬೋಜ(55)ನ ಶವ ಈಗ ಪತ್ತೆಯಾಗಿದೆ.
ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಬೋಜ ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟಿದ್ದ, ಇದರಿಂದ 7 ಜನ ಮೃತಪಟ್ಟಿದ್ದರು. ಈ ಘಟನೆ ಬಳಿಕ ಆರೋಪಿ ಬೋಜ ನಾಪತ್ತೆಯಾಗಿದ್ದನು. ಪೊನ್ನಂಪೇಟೆ ಠಾಣೆ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದರು. ಈಗ ಗದ್ದೆಯಲ್ಲಿ ಬೋಜನ ಶವ ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವ ಆರೋಪಿ ಬೋಜನದೇ ಎಂಬುದನ್ನು ಖಚಿತಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ಬೋಜ ಘಟನೆ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಏನೆಂಬುದು ಗೊತ್ತಾಗಲಿದೆ.
ಘಟನೆ ವಿವರ: ಸೊಡ್ಲೂರು ಗ್ರಾಮದಲ್ಲಿ ವಾಸವಾಗಿದ್ದ ಬೋಜ ಮತ್ತು ಬೇಬಿ ದಂಪತಿ ನಡುವೆ ಜಗಳವಾಗಿತ್ತು. ಪತಿಯ ಕಿರುಕುಳದಿಂದ ಬೇಸತ್ತಿದ್ದ ಬೇಬಿ ಮುಗುಟಗೇರಿ ಗ್ರಾಮದಲ್ಲಿರುವ ಸಹೋದರನ ಮನೆಗೆ ಬಂದು ವಾಸವಾಗಿದ್ದರು. ಮನೆಗೆ ವಾಪಸ್ ಬರುವಂತೆ ಬೋಜ ಕರೆದರೂ ಹೋಗಿರಲಿಲ್ಲ ಎನ್ನಲಾಗಿದೆ. ಇದೇ ಕೋಪಕ್ಕೆ ಏ.3ರಂದು ನಸುಕಿನ ಜಾವ ಇವರ ಮನೆ ಬಳಿ ಬಂದು ಹಿಂಬಾಗಿಲು ಹಾಗೂ ಮುಂಬಾಗಿಲಿನ ಚಿಲಕ ಹಾಕಿ ನಂತರ ಮನೆ ಹತ್ತಿ ಹೆಂಚು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಬೆಂಕಿಯು ಕ್ಷಣಾರ್ಧದಲ್ಲಿ ಮನೆಯೆಲ್ಲ ವ್ಯಾಪಿಸಿ ಮನೆಯೊಳಗಿದ್ದವರು ಹೊರಗೆ ಬರಲು ಸಾಧ್ಯವಾಗದೆ ಮೂವರು ಸ್ಥಳದಲ್ಲೇ ಸಜೀವ ದಹನವಾಗಿದ್ದನು. ಬೇರೆ ಕೊಠಡಿಯಲ್ಲಿ ಮಲಗಿದ್ದ ಮಂಜ ಮತ್ತು ತೋಲ ಎಂಬುವವರು ಹೇಗೋ ಹೊರಗೆ ಬಂದದರು. ಆದರೆ ಸುಟ್ಟ ಗಾಯಗಳಿಂದ ಗಂಭೀರವಾಗಿದ್ದ ಮೂವರು ಮಕ್ಕಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದದರು. ಆದರೆ ಅವರೂ ಮೃತಪಟ್ಟರು. ನಂತರ ಮತ್ತೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೋಜನ ಕುಡಿತ ಇಂತಹದ್ದೊಂದು ದುರಂತಕ್ಕೆ ಕಾರಣವಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ