ನಾಳೆಯಿಂದ ಸಾರಿಗೆ ನೌಕರರ ಮುಷ್ಕರ, ಆದರೆ ಹಲವೆಡೆ ಇಂದೇ ಬಸ್‌ ಇಲ್ಲ..!

posted in: ರಾಜ್ಯ | 0

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೆ ನಾಳೆಯಿಂದ (ಏ.೭) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದರೆ ಬುಧವಾವಾರದ ಮುಷ್ಕರದ ಬಿಸಿ ಮಂಗಳವಾರ (ಏ.೬) ಮಧ್ಯಾಹ್ನದಿಂದಲೇ ಪ್ರಾರಂ‌ಭವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಬಸ್​ ನಿಲ್ದಾಣಗಳಲ್ಲಿ ಸರಿಯಾಗಿ ಬಸ್​ಗಳು ಬಾರದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ ಕೊರತೆ ಇರುವುದರಿಂದ ಇರುವ ಬಸ್​ಗಳಲ್ಲೇ ಪ್ರಯಾಣ ಮಾಡಿ ಸಹಕರಿಸುವಂತೆ ಮೈಕ್ ಮೂಲಕ ಬಿಎಂಟಿಸಿ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬಿಎಂಟಿಸಿ ಡಿಪೋಗಳಲ್ಲಿ ಬಸ್​ಗಳು ಸರಿಯಾಗಿ ಆಪರೇಟ್ ಆಗುತ್ತಿಲ್ಲ. ಸೆಕೆಂಡ್ ಶಿಫ್ಟ್​ನಲ್ಲಿ ಕೆಲ ಡಿಪೋಗಳಲ್ಲಿ ಚಾಲಕರು ಇಲ್ಲ‌. ಬಸ್​ಗಳ ಚಾಲನೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಮೆಜೆಸ್ಟಿಕ್ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿ ಬಸ್ ನಿಲ್ದಾಣದಲ್ಲಿ ಬೆರಳಣಿಕೆ ಬಸ್ ಗಳ ಓಡಾಟವಿದ್ದು, ಪ್ಲಾಟ್ ಫಾರಂ ಖಾಲಿ ಖಾಲಿಯಾಗಿವೆ. ನೆಲ ಮಂಗಲ ಸೇರಿದಂತೆ ಕೆಲವೆಡೆ ಮಧ್ಸಾಯಾಹ್ರಿನದಿಂದಲೇ ಬಸ್ ಸಂಚಾರ ಬಂದ್‌ ಆಗಿದೆ.

ನೌಕರರು ಮುಷ್ಕರ ನಡೆಸದಂತೆ ಕೆಎಸ್​ಆರ್​ಟಿ ಸಿ ಎಂಡಿ ಶಿವಯೋಗಿ ಕಳಸದ ಮನವಿ ಮಾಡಿದ್ದಾರೆ.

ಆದರೂ ಸಾರಿಗೆ ನೌಕರರು ಮತ್ತು ಸರ್ಕಾರದ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಸರ್ಕಾರದ ಭರವಸೆಗಳ ನಡುವೆಯೂ ನಾಳೆ ಮುಷ್ಕರಕ್ಕೆ ಸಜ್ಜಾಗಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರವೂ ಹೆದರದೆ ನಿಂತಿದೆ. ನಾಳೆ ಮುಷ್ಕರ ನಡೆಸಲು ನೌಕರರು ಹಠ ತೊಟ್ಟರೆ ಸರ್ಕಾರ ಎಸ್ಮಾ ಜಾರಿಗೂ ಮುಂದಾಗಬಹುದು. ಸಾರಿಗೆ ನೌಕರರ ಒಂಬತ್ತು ಪ್ರಮುಖ ಬೇಡಿಕೆಗಳ ಪೈಕಿ ಆರನೇ ವೇತನ ಆಯೋಗದ ವರದಿ ಜಾರಿಯ ಬೇಡಿಕೆ ಈಡೇರಿಸಲು ಸಾಧ್ಯ ಇಲ್ಲ, ಬದಲಿಗೆ ನೌಕರರಿಗೆ ಶೇ. 8ರಷ್ಟು ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ, ತಮಗೆ ಆರನೇ ವೇತನ ಆಯೋಗ ಜಾರಿಯೇ ಆಗಬೇಕು ಎಂಬುದು ಸಾರಿಗೆ ನೌಕರರ ಸಂಘದ ಹೇಳಿದೆ. ಹೀಗಾಗಿ, ಬುಧವಾರ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಿತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ