ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್​ ಬೇಕೇ?: ದೆಹಲಿ ಹೈಕೋರ್ಟ್​ ಮಹತ್ವದ ಆದೇಶ

ನವ ದೆಹಲಿ: ಕೊವಿಡ್‌ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಮಾಸ್ಕ್‌ ಧರಿಸುವ ಬಗ್ಗೆ ದೆಹಲಿಯ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.
ವ್ಯಕ್ತಿಯೊಬ್ಬ ಒಬ್ಬರೇ ಕಾರನ್ನು ಚಲಾಯಿಸುತ್ತಿರುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿರುವ ದೆಹಲಿ ದಿಲ್ಲಿ ಹೈಕೋರ್ಟ್, ಕಾರು ಸಾರ್ವಜನಿಕ ಸ್ಥಳ’ ಎಂದು ಅಭಿಪ್ರಾಯಪಟ್ಟಿದೆ.
ಮಾಸ್ಕ್’ ಅದನ್ನು ಧರಿಸಿರುವ ವ್ಯಕ್ತಿಗಷ್ಟೇ ಅಲ್ಲ, ಸುತ್ತಮುತ್ತಲಿನವರಿಗೂ ಸುರಕ್ಷತಾ ರಕ್ಷಾ ಕವಚ ಎಂದು ಹೇಳಿರುವ ದೆಹಲಿ ಹೈಕೋರ್ಟ್‌, ಒಬ್ಬರೇ ವಾಹನ ಚಲಾಯಿಸುವಾಗ ಮಾಸ್ಕ್ ಧರಿಸದೇ ಇರುವುದಕ್ಕೆ ದಂಡ ಹಾಕಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರತಿಭಾ ಎಂ.ಸಿಂಗ್ ಈ ಆದೇಶ ನೀಡಿದ್ದಾರೆ.
ಕಾರಿನಲ್ಲಿ ಏಕಾಂಗಿಯಾಗಿದ್ದರೂ ಮಾಸ್ಕ್ ಧರಿಸಲು ಏಕೆ ಆಕಷೇಪ ಏಕೆ?ಇದು ನಿಮ್ಮ ಸ್ವಂತ ಸುರಕ್ಷತೆಗಾಗಿ ಬೇಕು. ಈಗ ಕೊವಿಡ್‌ ಸಾಂಕ್ರಾಮಿಕದ ಉಲ್ಬಣ ಹೆಚ್ಚಾಗಿದೆ. ಒಬ್ಬ ವ್ಯಕ್ತಿಗೆ ಲಸಿಕೆ ನೀಡಲಾಗಿದೆಯೋ, ಇಲ್ಲವೋ ಬೇಡ, ಆತ ಮಾಸ್ಕ್ ಧರಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.
ತಾನು ಏಕಾಂಗಿಯಾಗಿ ವಾಹನ ಚಲಾಯಿಸುವಾಗ ದಿಲ್ಲಿ ಪೊಲೀಸರು ತನ್ನನ್ನು ತಡೆದು ಬಲವಂತದ 500 ರೂ.ದಂಡ ಹಾಕಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ವಕೀಲ ಸೌರಭ್ ಶರ್ಮಾ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶ ನೀಡಿದೆ.
ಚಾಲಕ ಒಬ್ಬರೇ ಇರುವಾಗ ಮಾಸ್ಕ್ ಧರಿಸಬೇಕೆಂಬ ನಿಯಮವಿಲ್ಲ ಎಂದು ಹೈಕೋರ್ಟ್‍ಗೆ ತಿಳಿಸಿದ ಕೇಂದ್ರ ಆರೋಗ್ಯ ಸಚಿವಾಲಯ, ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ನಿಯಮಗಳನ್ನು ರೂಪಿಸುವ ಹಾಗೂ ಅವುಗಳನ್ನು ಜಾರಿಗೊಳಿಸುವ ಹಕ್ಕಿದೆ ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement