ನೋ ವರ್ಕ್ ನೋ ಪೇ:ಶಿಖಾ

posted in: ರಾಜ್ಯ | 0

ಬೆಂಗಳೂರು: ಕೆಲಸಕ್ಕೆ ಹಾಜರಾಗದಿದ್ದರೆ ಮಾರ್ಚ್ ತಿಂಗಳ ವೇತನ ಕಡಿತಗೊಳಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಹೇಳಿದ್ದಾರೆ.
ಯಶವಂತಪುರ ಡಿಪೋಕ್ಕೆಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋ ವರ್ಕ್ ನೋ ಪೇ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದು ತಿಳಿಸಿದರು.
ಮುಷ್ಕರ ನಿರತರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಉಪಮುಖ್ಯಮಂತ್ರಿಗಳು ಕೂಡ ಸಭೆ ನಡೆಸಿ ಸಂಧಾನ ಯತ್ನ ನಡೆಸಿದ್ದಾರೆ.
ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ. ಆದರೂ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ. ಅವರು ಕೆಲಸಕ್ಕೆ ಹಾಜರಾಗಬೇಕು. ಯಾರ್ಯಾರು ಕರ್ತವ್ಯಕ್ಕೆ ಬರುವುದಿಲ್ಲವೋ ಅವರಿಗೆ ನಾವು ಸಂಬಳ ನೀಡುವುದಿಲ್ಲ. 135 ಬಿಎಂಟಿಸಿ ಬಸ್‍ಗಳು ಮಾತ್ರ ಇಂದು ನಗರದಲ್ಲಿ ಸಂಚಾರ ಮಾಡುತ್ತಿವೆ. ಖಾಸಗಿ ಬಸ್ ಮೂಲಕವೂ ಕೂಡ ಸಂಚಾರ ನಡೆದಿದೆ. ರಾಜ್ಯದಿಂದ ಇತರೆ ಜಿಲ್ಲೆಗಳಿಗೆ ಯುಗಾದಿ ವೇಳೆ ರೈಲು ಹೆಚ್ಚಳ ಮಾಡಲು ಚರ್ಚೆ ಮಾಡಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆಗೂ ಕೂಡ ಮನವಿ ಮಾಡಲಾಗುತ್ತದೆ ಎಂದು ಶಿಖಾ ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ