ಮೇ 2ರ ನಂತರ ಏನೇನು ಬದಲಾವಣೆಯಾಗುತ್ತದೆ ಕಾದುನೋಡಿ:ಯತ್ನಾಳ

ಬೆಳಗಾವಿ : ಮುಖ್ಯಮಂತ್ರಿ ಯಡಿಯೂರಪ್ಪನವರು ಮೀಸಲಾತಿ ಕೊಡದಿದ್ರೂ ಪರವಾಗಿಲ್ಲ. ಯಾರು ಹೊಸ ಮುಖ್ಯಮಂತ್ರಿಯಾಗುತ್ತಾರೆಯೋ ಅವರು ಕೊಡುತ್ತಾರೆ. ಮೇ 2ರ ನಂತರ ಏನೇನು ಬದಲಾವಣೆ ಆಗುತ್ತದೆ ಕಾದು ನೋಡಿ.. ಬದಲಾವಣೆ ಖಚಿತ ಬರೆದಿಟ್ಟುಕೊಳ್ಳಿ. ಉತ್ತರ ಕರ್ನಾಟಕದವರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ. ಆದರೂ ನಾನು ಪ್ರಚಾರ ಮಾಡುತ್ತೇನೆ. ನಾಳೆಯಿಂದ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಬೆಳಗಾವಿಯಿಂದ ಪ್ರಚಾರಕ್ಕೆ ಬರುವಂತೆ ಸಾಕಷ್ಟು ಕರೆಗಳು ನಮಗೆ ಬರುತ್ತಿವೆ. ಬೆಲ್ಲದ್ ನಾನು ಪಂಚಮಸಾಲಿ ಸಮುದಾಯದವರು. ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ್ದೆವು. ಹೀಗಾಗಿ ಪ್ರಚಾರಕ್ಕೆ ಹೋಗುವ ಬಗ್ಗೆ ಚರ್ಚಿಸಿದ್ದೇವೆ. ನಾನು ನಮ್ಮ ಪ್ರಧಾನಿಯವರನ್ನ ನೋಡಿ ಮತಹಾಕಿ ಎಂದು ಕೇಳುತ್ತೇನೆ.ನಾಳೆಯಿಂದ ನಾವು ಪ್ರಚಾರಮಾಡುತ್ತೇನೆ ಎಂದು ಹೇಳಿದರು.
ಈಶ್ವರಪ್ಪ ಮತ್ತೆ ಉಲ್ಟಾ ಹೊಡೆದ ಬಗ್ಗೆ ಪ್ರತಿಕ್ರಯಿಸಿದ ಅವರು, ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರು ರಾಜ್ಯಪಾಲರ ಭೇಟಿ ಮಾಡಿದ್ದಾರೆ. ಅದು ನನಗೇನೂ ಗೊತ್ತಿರಲಿಲ್ಲ. ಹೀಗಾಗಿ ನೀವು ಈ ವಿಷಯವನ್ನ ಅವರ ಬಳಿಯೇ ಕೇಳಬೇಕು ಎಂದ ಅವರು ಏಪ್ರಿಲ್ 17ರ ನಂತರ ಬಹಳ ಮಂದಿ ಯಡಿಯೂರಪ್ಪ ಸರ್ಕಾರದ ವಿರುದ್ಧ ರೊಚ್ಚಿಗೇಳುತ್ತಾರೆ. ಅವರೇ ಸೂರ್ಯ ಚಂದ್ರ ಇರುವವರೆಗೆ ಹೇಗೆ ಮುಖ್ಯಮಂತ್ರಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪನವರಿಗೆ 370 ಆಕ್ಟ್ ಏನಾದ್ರೂ ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಕೇಳಿದರು.
ಶಾಸಕ ಬೆಲ್ಲದ್ ಜೊತೆ ಮಾತುಕತೆ ವಿಚಾರವಾಗಿಯೂ ಮಾತನಾಡಿದ ಅವರು, ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿದ್ದೆವು. ನಮ್ಮ ಸಮುದಾಯದ ಸಮಾವೇಶ ನಡೆದಿತ್ತು. ಈಗ ಚುನಾವಣೆ ಬಂದಿದೆ ಪ್ರಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೆ ಎಂದು ಹೇಳಿದರು.

ಇಂದಿನ ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement