ಕೊರೊನಾ ಲಸಿಕೆ ನೀಡಿಕೆ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಭಾರತ

ನವದೆಹಲಿ:ಕೊರೋನಾ ವ್ಯಾಕ್ಸಿನೇಷನ್‌ ನಲ್ಲಿ ಭಾರತ, ಅಮೆರಿಕವನ್ನೂ ಹಿಂದಿಕ್ಕಿದ್ದು, ಒಂದು ದಿನದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ.

ಭಾರತ ಸರಾಸರಿ ಒಂದು ದಿನಕ್ಕೆ 30,93,861 ಡೋಸ್ ಲಸಿಕೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ದೇಶದಲ್ಲಿ ಇದುವರೆಗೆ 8.70 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ವರದಿಯ ಪ್ರಕಾರ, ಈವರೆಗೆ 13,32,130 ಲಸಿಕಾ ಕೇಂದ್ರಗಳ  ಮೂಲಕ 8,70,77,474 ಡೋಸ್ ಲಸಿಕೆ ನೀಡಲಾಗಿದೆ. ಈವರೆಗೆ ಲಸಿಕೆ ಪಡೆದವರಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ, ಕೇರಳ ರಾಜ್ಯಗಳ  60% ರಷ್ಟು ಜನರು ಸೇರಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ