ಮುಷ್ಕರಕ್ಕೆ ಬೆಂಬಲಿಸಿ ಕೆಲಸಕ್ಕೆ ಗೈರು; ತರಬೇತಿ ನಿರತ 96 ನೌಕರರಿಗೆ ಬಿಎಂಟಿಸಿ ಗೇಟ್‌ ಪಾಸ್..!

ಬೆಂಗಳೂರು: ಬಿಎಂಟಿಸಿಯು ನೌಕರರಿಗೆ ಬಿಗ್‌ ಶಾಕ್‌ ನೀಡಿದ್ದು, ತರಬೇತಿ ನಿರತ 96 ಸಾರಿಗೆ ನೌಕರರನ್ನ ವಜಾ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಎಂಟಿಸಿ, ‘ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ತರಬೇತಿ ನೌಕರರನ್ನ ಮಾತ್ರ ವಜಾ ಮಾಡಲಾಗಿದೆ. ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ನೋಟಿಸ್ ನೀಡಿತ್ತು. ಆದರೆ ನೋಟಿಸ್ ನೀಡಿದ್ದರೂ ಅವರು ಹಾಜರಾಗದ ನೌಕರರನ್ನ ವಜಾ ಮಾಡಿದೆ’ ಎಂದು ತಿಳಿಸಿದೆ.
1400 ತರಬೇತಿ ಸಿಬ್ಬಂದಿ ಇದ್ದಾರೆ. ಸಾರಿಗೆ ನಿಗಮಗಳ ಪ್ರಕಾರ ತರಬೇತಿ ಸಿಬ್ಬಂದಿ ಯಾವುದೇ ಮುಷ್ಕರಗಳಲ್ಲಿ ಭಾಗವಹಿಸುವುದಾಗಲಿ, ಸೂಕ್ತ ಕಾರಣಗಳಿಲ್ಲದೇ ಕರ್ತವ್ಯಕ್ಕೆ ಗೈರಾಗುವುದಾಗಲೀ ಮಾಡುವಂತಿಲ್ಲ. ತರಬೇತಿಯಲ್ಲಿರುವ ಉಳಿದ ಸಿಬ್ಬಂದಿ ಕೂಡಲೇ ಕರ್ತವ್ಯಕ್ಕೆ ಹಾಜರಾಗ ತಕ್ಕದ್ದು. ಇಲ್ಲವಾದರೆ ಅವರನ್ನ ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಬಿಎಂಟಿಸಿ ಎಚ್ಚರಿಕೆ ನೀಡಿದೆ.
ಸಂಸ್ಥೆ ಉಳಿದ ನೌಕರರಿಗೂ ಎಚ್ಚರಿಕೆ ನೀಡಿರುವ ಸಂಸ್ಥೆ, ಮುಷ್ಕರ ಕೈಬಿಡುವ ವರೆಗೂ ಹಂತ ಹಂತವಾಗಿ ನೌಕರರನ್ನ ವಜಾ ಮಾಡಲಾಗುತ್ತದೆ ಎಂದು ಎಚ್ಚರಿಸಿದೆ. ಮೊದಲು ತರಬೇತಿಯಲ್ಲಿರುವ 1.400 ಸಿಬ್ಬಂದಿ ವಜಾ ಮಾಡಲಾಗುತ್ತದೆ. ನಂತರ ಪ್ರೊಬೆಷನ್ʼ​ನಲ್ಲಿ ಇರುವ 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವಜಾ ಮಾಡಲಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ಪ್ರಮುಖ ಸುದ್ದಿ :-   ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ : ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್‌ ಬುಲಾವ್

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement