ಸಾರಿಗೆ ನೌಕರರ ಮುಷ್ಕರ: ಹೆಚ್ಚುವರಿ ರೈಲು ಸಂಚಾರ ಆರಂಭ

posted in: ರಾಜ್ಯ | 0

 

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಇಂದಿನಿಂದ ನೈರುತ್ಯ ರೈಲ್ವೆ ಏಪ್ರಿಲ್ 14ರ ವರೆಗೆ ಹೆಚ್ಚುವರಿ ರೈಲು ಸಂಚಾರ ನಡೆಸಲಿದೆ.
ಸಾರಿಗೆ ನೌಕರರ ಮುಷ್ಕರದಿಂದಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ರೈಲು ಸಂಚಾರ ಸೇವೆ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ನೈಋತ್ಯ ರೈಲ್ವೆಯಿಂದ ಕೆಲವು ರೈಲುಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮತ್ತೆ 18 ಹೆಚ್ಚುವರಿ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಯುಗಾದಿ ಸಮಯದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ. ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುವುದನ್ನು ತಪ್ಪಿಸಲು ನೈರುತ್ಯ ರೈಲ್ವೆ ಈ ಕ್ರಮ ಕೈಗೊಂಡಿದೆ. ನೈಋತ್ಯ ರೈಲ್ವೆಯಿಂದ ಒಟ್ಟು 18 ಹೆಚ್ಚುವರಿ ರೈಲುಗಳ ಸೇವೆ ನೀಡಲಾಗಿದೆ. ರೈಲುಗಳ ಹೆಚ್ಚುವರಿ ಸೇವೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸೇವೆ ನೀಡಲಾಗಿದೆ.
ಹುಬ್ಬಳ್ಳಿ-ಯಶವಂತಪುರ, ಯಶವಂತಪುರ – ವಿಜಯಪುರ, ಯಶವಂತಪುರ-ಬೆಳಗಾವಿ, ಬೆಳಗಾವಿ-ಯಶವಂತಪುರ, ಮೈಸೂರು-ಬೀದರ್, ಬೀದರ್ – ಮೈಸೂರು, ಯಶವಂತಪುರ – ಬೀದರ್, ಬೀದರ್ – ಯಶವಂತಪುರ, ಸಂಗೊಳ್ಳಿ ರಾಯಣ್ಣ ನಿಲ್ದಾಣ-ಮೈಸೂರು, ಮೈಸೂರು – ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ – ಮೈಸೂರು, ಮೈಸೂರು – ಯಶವಂತಪುರ, ಯಶವಂತಪುರ – ಶಿವಮೊಗ್ಗ, ಶಿವಮೊಗ್ಗ – ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ – ಕಾರವಾರ, ಕಾರವಾರ – ಯಶವಂತಪುರ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ