ಬ್ರಿಟನ್ ರಾಣಿ ಎಲಿಜಬೆತ್ ಪತಿ ರಾಜ ಫಿಲಿಪ್ ನಿಧನ

ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ ಪತಿ ರಾಜ ಫಿಲಿಪ್ (99) ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು ಹೃದಯ ಶಸ್ತ್ರ ಚಿಕಿತ್ಸೆ ಕೂಡ ಯಶಸ್ವಿಯಾಗಿ ನಡೆಸಲಾಗಿತ್ತು.
ಅವರ ನಿಧನದ ಕುರಿತು ಬಕಿಂಗ್‌ಹ್ಯಾಮ್ ಅರಮನೆ ಮಾಹಿತಿ ನೀಡಿದೆ. ಪತಿಯ ಸಾವಿನ ಸುದ್ದಿ ಕೇಳಿ ಬಹಳ ದುಃಖವಾಗಿದೆ ಎಂದು ಎಲಿಜಬೆತ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್‌ಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಲಾಕ್ ಡೌನ್ ಸಮಯದಲ್ಲಿ ಬ್ರಿಟನ್‌ ರಾಜ, ರಾಣಿ ಇದೇ ಅರಮನೆಯಲ್ಲಿ ನೆಲೆಸಿದ್ದರು. ಮಾರ್ಚ್‌ನಿಂದ ಅಕ್ಟೋಬರ್ ವರೆಗೆ ನಡೆದ ಯಾವುದೇ ಬಹಿರಂಗ ಕಾರ್ಯಕ್ರಮಗಳಲ್ಲಿ ಈ ದಂಪತಿ ಕಾಣಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ ರಾಜ ದಂಪತಿಯ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಕೋವಿಡ್ ಸೋಂಕಿಗೆ ಒಳಗಾಗಿದ್ದರು.
ರಾಜ, ರಾಣಿ ಕ್ರಿಸ್‌ಮಸ್ ಹಬ್ಬವನ್ನು ಬರ್ಕ್‌ಷೈರ್ ರೆಸಿಡೆನ್ಸಿಯಲ್ಲಿ ಆಚರಿಸಿಕೊಂಡಿದ್ದರು. ಕೊರೊನಾ ಸಾಂಕ್ರಾಮಿಕ ನಂತರ ಮೊದಲ ಬಾರಿಗೆ ಕಳೆದ ತಿಂಗಳು ರಾಣಿ ಎಲಿಜಬತ್ ರಾಜ ಕುಟುಂಬದ ಹಿರಿಯ ಸದಸ್ಯರನ್ನು ಭೇಟಿಯಾಗಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ