ಮಹತ್ವದ ಸುದ್ದಿ..ಸಾರಿಗೆ ಮುಷ್ಕರವನ್ನೇ ನಿಷೇಧಿಸಿದ ಸರ್ಕಾರ; ನೌಕರರ ಮೇಲೆ ಕಾನೂನು ಅಸ್ತ್ರ ..!

ಬೆಂಗಳೂರು:  ಕಳೆದ ಮೂರುದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸಿದೆ. ಸರ್ಕಾರದ ಒಪ್ಪಂದ ಮನವಿಗೆ ಒಪ್ಪದ ನೌಕರರ ಮುಷ್ಕರವನ್ನೇ ನಿಷೇಧಿಸಿ ಸರ್ಕಾರ ಆದೇಶಿಸಿದೆ.
ಕಾನೂನಿನ ಮೂಲಕ ಸಾರಿಗೆ ನೌಕರರ ಮುಷ್ಕರವನ್ನ ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು,  ಸಾರ್ವಜನಿಕ ಉಪಯುಕ್ತ ಸೇವೆ ಎಂದು ಪರಿಗಣಿಸಿ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕೈಗಾರಿಕಾ ವಿವಾದ ಕಾಯ್ದೆ 21(1) (d) ಅನ್ವಯ ಮುಷ್ಕರಕ್ಕೆ ತಡೆ ನೀಡಿ, ಮುಷ್ಕರ ನಿಷೇಧಿಸಿ ನಾಲ್ಕು ನಿಗಮಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಕೈಗಾರಿಕಾ ವಿವಾದ ಕಾಯ್ದೆ 21(1) (d) ಅನ್ವಯ ಸಂಧಾನ‌ ಪ್ರಕ್ರಿಯೆ ಬಾಕಿ ಇರುವಾಗ ಯಾವುದೇ ಮುಷ್ಕರ ನಡೆಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಇನ್ನು ಬಿಎಂಟಿಸಿ, ಕೆಎಸ್‌ಆರ್​ಟಿಸಿ, ವಾಯುವ್ಯ, ಈಶಾನ್ಯ ನಾಲ್ಕೂ ನಿಗಮಗಳ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ತಕ್ಷಣಕ್ಕೆ ಜಾರಿಗೆ ತರುವಂತೆ ಸೂಚಿಸಿದೆ.

ಸಾರಿಗೆಯನ್ನು  ಸಾರ್ವಜನಿಕ ಉಪಯುಕ್ತ ಸೇವೆ ಎಂದು ಪರಿಗಣಿಸಿ ಮುಷ್ಕರ ನಿಷೇಧಿಸಿ ನಾಲ್ಕು ನಿಗಮಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೈಗಾರಿಕಾ ವಿವಾದ ಕಾಯ್ದೆ 21 (1) (d) ಅನ್ವಯ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಮುಷ್ಕರ ನಡೆಸುವಂತಿಲ್ಲ. ಈ ತಕ್ಷಣಕ್ಕೆ ಜಾರಿಗೆ ಬರುವಂತೆ ಮುಷ್ಕರ ನಿಷೇಧಿಸಿ ವಿವಾದವನ್ನು ನ್ಯಾಯ ನಿರ್ಣಯಕ್ಕಾಗಿ ಸರ್ಕಾರ ಕಳುಹಿಸಿದೆ. ಅಲ್ಲದೇ ಆರು ತಿಂಗಳ ಒಳಗಾಗಿ ತೀರ್ಪನ್ನು ಒಪ್ಪಿಸಲು ಔದ್ಯಮಿಕ ನ್ಯಾಯಾಧೀಕರಣಕ್ಕೆ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ಸೋನಿಯಾ ಗಾಂಧಿಗೆ ಸಿದ್ದರಾಮಯ್ಯರನ್ನು ಪರಿಚಯಿಸಿದ್ದೇ ನಾನು, ಲಾಟರಿ ಹೊಡೆದ್ರು ಸಿಎಂ ಆದ್ರು ; ಬಿ.ಆರ್. ಪಾಟೀಲ ಫೋನ್ ಕರೆ ಲೀಕ್‌

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement