ಸಾರಿಗೆ ಮುಷ್ಕರ: ಕೋಡಿಹಳ್ಳಿಗೆ ನೋಟಿಸ್‌ ನೀಡಿದ ವಿದ್ಯಾರ್ಥಿನಿ..!

posted in: ರಾಜ್ಯ | 0

ಬೆಂಗಳೂರು: ಸಾರಿಗೆ ಮುಷ್ಕರದಿಂದ ತೊಂದರೆ ಅನುಭವಿಸುತ್ತಿರುವವರು ಜನಸಾಮನ್ಯರು. ಅದರಲ್ಲೂ ಪರೀಕ್ಷೆಗೆ ತೆರಳಬೇಕಾದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ನಡುವೆ ತುಮಕೂರಿನ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿನಿಯೊಬ್ಬಳು ಮುಷ್ಕರದ ನೇತೃತ್ವ ವಹಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಗೆ 10 ಲಕ್ಷ ರೂ. ಪರಿಹಾರ ನೀಡುವಂತೆ  ನೋಟಿಸ್ ನೀಡಿದ್ದಾಳೆ.
ಪಾಸ್ ಹೊಂದಿರುವವರಿಗೆ ಬಸ್ ಸೌಲಭ್ಯ ಒದಗಿಸಿಲ್ಲ. ಇದು ಸೇವಾ ನ್ಯೂನತೆ ಆಗಿದೆ. ಇದು ಅನುಚಿತ ವ್ಯಾಪಾರ ಪದ್ಧತಿಯೂ ಆಗಿದೆ. ಹೀಗಾಗಿ ನನಗೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ತಮ್ಮ ವಕೀಲರ ಮೂಲಕ ಕೋಡಿಹಳ್ಳಿ ಚಂದ್ರಶೇಖರ್, ಹಾಗೂ ಬಿಎಂಟಿಸಿ ಎಂಡಿಗೆ ಪರಿಹಾರ ಕೇಳಿ ನೋಟಿಸ್ ನೀಡಿದ್ದಾಳೆ..

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ