ಕೊವಿಡ್‌ ಸಾಂಕ್ರಾಮಿಕದ ನಡುವೆಯೂ ಮಾರಾಟದಲ್ಲಿ 116 ವರ್ಷಗಳ ದಾಖಲೆ ಮುರಿದ ರೋಲ್ಸ್ ರಾಯ್ಸ್ ಕಾರು…!

ಕೊವಿಡ್‌ನಿಂದ ಹೆಚ್ಚು ಬಾಧಿತವಾಗಿರುವ ಬ್ರಿಟನ್ನಿನ ಐಷಾರಾಮಿ ಕಾರು ವಾಹನ ತಯಾರಕ ರೋಲ್ಸ್ ರಾಯ್ಸ್ 2020 ರಲ್ಲಿ ಇದೇ ಅವಧಿಗೆ ಹೋಲಿಸಿದರೆ 2021 ರ ಮಾರ್ಚ್ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇಕಡಾ 62 ರಷ್ಟು ಏರಿಕೆ ದಾಖಲಿಸಿದೆ.
ಇದು ಗ್ರಾಹಕರಿಗೆ 1,380 ಮೋಟಾರು ಕಾರುಗಳನ್ನು ತಲುಪಿಸಿದ್ದು, 2020ರ ಇದೇ ಅವಧಿಗೆ ಹೋಲಿಸಿದರೆ ಶೇ.62 ರಷ್ಟು ಏರಿಕೆ ಕಂಡಿದೆ ಮತ್ತು ಹಿಂದಿನ 2019 ರ ಮೊದಲ ತ್ರೈಮಾಸಿಕ ದಾಖಲೆಯನ್ನೂ ಮೀರಿಸಿದೆ ಅಷ್ಟೇ ಅಲ್ಲ, ಇದು ಬ್ರಾಂಡ್‌ನ 116 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಮಾರಾಟವಾದ ದಾಖಲೆಯಾಗಿದೆ..!
ರೋಲ್ಸ್ ರಾಯ್ಸ್ ಮೋಟರ್ ಕಾರ್ಸ್ 2021ರಲ್ಲಿ ಉತ್ತಮ ಆರಂಭ ನೀಡಿತು, ಇದು ನಮ್ಮ ಮೊದಲ ತ್ರೈಮಾಸಿಕದ ಮಾರಾಟ ಅಂಕಿ ಅಂಶಗಳಲ್ಲಿ ಪ್ರತಿಫಲಿಸುತ್ತದೆ, ಇದು ನಮ್ಮ 116 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾರುಗಳ ಮಾರಾಟವಾಗಿದೆ. ವಿಶೇಷವಾಗಿ ಹೊಸ ಘೋಸ್ಟ್ ಮತ್ತು ಕುಲ್ಲಿನನ್ ಮಾಡೆಲ್‌ಗಳು ಪ್ರಮುಖ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಮಾರಾಟವಾಗಿವೆ. ಭಾರತದಲ್ಲಿ, ಕುಲ್ಲಿನಾನ್ ಮತ್ತು ಘೋಸ್ಟ್ ಬೆಲೆ 6.95 ಕೋಟಿ ರೂ. 2021 ರ ಉಳಿದ ಭಾಗಕ್ಕೆ ನಾವು ಆಶಾವಾದಿಗಳಾಗಲು ಎಲ್ಲ ಕಾರಣಗಳಿವೆ ”ಎಂದು ರೋಲ್ಸ್ ರಾಯ್ಸ್ ಮೋಟರ್ ಕಾರ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾರ್ಸ್ಟನ್ ಮುಲ್ಲರ್-ಎಟ್ವಾಸ್ ಹೇಳಿದ್ದಾರೆ.
ಚೀನಾ, ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್ ದೇಶಗಳಿಂದ ಉತ್ತಮ ಬೆಳವಣಿಗೆಯನ್ನು ಕಂಪನಿ ವರದಿ ಮಾಡಿದೆ. ಎಲ್ಲಾ ರೋಲ್ಸ್ ರಾಯ್ಸ್ ಮಾದರಿಗಳ ಬೇಡಿಕೆಯು ಅತ್ಯಂತ ಉತ್ಸಾಹಭರಿತವಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ, ವಿಶೇಷವಾಗಿ 2020 ರಲ್ಲಿ ಬಿಡುಗಡೆಯಾದ ಹೊಸ ಘೋಸ್ಟ್ ಮತ್ತು ಸೂಪರ್ಲಕ್ಸರಿ ಎಸ್‌ಯುವಿ, ಕುಲ್ಲಿನನ್ ಹೆಚ್ಚು ಮಾರಾಟವಾಗಿವೆ ಎಂದು ತಿಳಿಸಿದೆ.

ಇಂದಿನ ಪ್ರಮುಖ ಸುದ್ದಿ :-   ಇದು ವಿಶ್ವದ ಅತ್ಯಂತ ಭಾರವಾದ ಈರುಳ್ಳಿ : ಇದರ ತೂಕಕ್ಕೆ ಬೆರಗಾಗಲೇಬೇಕು...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement