ಮಹತ್ವದ ತೀರ್ಪು.. ಸಮಂಜಸ ಸಮಯದ ನಂತರ ಸಹಾನುಭೂತಿ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ನವ ದೆಹಲಿ: ಅನೇಕ ಸಂದರ್ಭಗಳಲ್ಲಿ, ಕರ್ತವ್ಯದ ಅವಧಿಯಲ್ಲಿ ಯಾವುದೇ ದುರಂತ ಎದುರಿಸಿದ ಅಥವಾ ವೈದ್ಯಕೀಯ ಆಧಾರದ ಮೇಲೆ ಅಥವಾ ಇತರ ಕಾರಣಗಳಿಂದ ನಿವೃತ್ತಿ ಹೊಂದಿದ ನೌಕರನ ಅವಲಂಬಿತ ಕುಟುಂಬ ಸದಸ್ಯರಿಗೆ ಸರ್ಕಾರ ಅಥವಾ ಸರ್ಕಾರಿ ಕಂಪನಿಗಳು ಸಹಾನುಭೂತಿಯ ನೇಮಕಾತಿ ನೀಡುತ್ತವೆ.ಆದರೆ ಸಮಂಜಸವಾದ ಅವಧಿಯ ನಂತರ ಸಹಾನುಭೂತಿಯ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಈಗ ಸುಪ್ರೀಂ ಕೋರ್ಟ್ ಹೇಳಿದೆ.
ಲೈವ್ ಲಾ ಪ್ರಕಾರ, ಅಂತಹ ಉದ್ಯೋಗ ಪರಿಗಣಿಸುವುದು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಬಳಸಬಹುದಾದ ಪಟ್ಟಭದ್ರ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಇದನ್ನು ಹೇಳಿದೆ.
2002 ರಿಂದ ನಾಪತ್ತೆಯಾಗಿರುವ ವಜಾಗೊಂಡ ಸೆಂಟ್ರಲ್ ಕೋಲ್ಫೀಲ್ಡ್ಸ್ ಲಿಮಿಟೆಡ್‌ನ ಉದ್ಯೋಗಿಯ ಪತ್ನಿಯು ಸಹಾನುಭೂತಿಯ ನೇಮಕಾತಿಗಾಗಿ ವಿನಂತಿಸಿದ್ದರು. ಈ ನೇಮಕಾತಿ ವಿನಂತಿಯು ಅವರ ಮಗನಿಗಾಗಿತ್ತು. ಆದರೆ ನೌಕರನನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಿದ್ದರಿಂದ ಸಹಾನುಭೂತಿಯ ನೇಮಕಾತಿ ವಿನಂತಿಗೆ ಮನ್ನಣೆ ನೀಡಲು ಸಾಧ್ಯವಿಲ್ಲ ಎಂದು ಅಪೆಕ್ಸ್‌ ಕೋರ್ಟ್‌ ಹೇಳಿದೆ.
ಹರಿಯಾಣ ಹೈಕೋರ್ಟ್‌ನಲ್ಲಿ ಪತ್ನಿ ರಿಟ್ ಅರ್ಜಿ ಸಲ್ಲಿಸಿದ್ದು, ಅದು ಕಂಪನಿಯ ವಜಾಗೊಳಿಸಿದ್ದ ಆದೇಶವನ್ನು ವಜಾಗೊಳಿಸಿ, ಕಾನೂನಿನ ಪ್ರಕಾರ ಮಗನನ್ನು ಸಹಾನುಭೂತಿಯಿಂದ ನೇಮಕ ಮಾಡುವ ಹಕ್ಕನ್ನು ಪರಿಗಣಿಸುವಂತೆ ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ಗೆ ನಿರ್ದೇಶನ ನೀಡಿತ್ತು.
ಕಂಪನಿಯು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈಗ, ಕುಟುಂಬದಲ್ಲಿ ಸಾವಿನ ಸಂದರ್ಭದಲ್ಲಿ ಸಹಾನುಭೂತಿಯ ಉದ್ಯೋಗವನ್ನು ನೀಡಲಾಗುವುದಿಲ್ಲ, ತನ್ನ ಏಕೈಕ ದುಡಿಯುವವನನ್ನು ಕಳೆದುಕೊಂಡು ಕುಟುಂಬವು ಆರ್ಥಿಕ ಬಿಕ್ಕಟ್ಟಿನಲ್ಲಿದ್ದರೆ ಮಾತ್ರ ಸಹಾನುಭೂತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ,
ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಪೀಠವು “ಸಮಂಜಸ ಅವಧಿ ಮುಗಿದ ನಂತರ ಸಹಾನುಭೂತಿಯ ಉದ್ಯೋಗ ನೀಡಲಾಗುವುದಿಲ್ಲ. ಏಕೆಂದರೆ ಅಂತಹ ಉದ್ಯೋಗವನ್ನು ಪರಿಗಣಿಸುವುದು ಅದು ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಚಲಾಯಿಸಬಹುದಾದ ಹಕ್ಕಲ್ಲ . ಕುಟುಂಬದ ಏಕೈಕ ದುಡಿಯುವ ವ್ಯಕ್ತಿ ಮರಣ ಹೊಂದಿದ ಸಮಯದಲ್ಲಿ ಕುಟುಂಬವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವುದು ಸಹಾನುಭೂತಿ ನೇಮಕಾತಿಯ ಉದ್ದೇಶವಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ ಹಾಗೂ ಸಹಾನುಭೂತಿಯ ನೇಮಕಾತಿಯನ್ನು ಬಹಳ ಸಮಯದ ನಂತರ ಹಾಗೂ ಬಿಕ್ಕಟ್ಟು ಮುಗಿದ ನಂತರ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಉದ್ಯೋಗಿ ನಾಪತ್ತೆಯಾದ ಕೂಡಲೇ ಯಾವುದೇ ಆರ್ಥಿಕ ಬಿಕ್ಕಟ್ಟು ಇಲ್ಲ ಎಂದು ಕಂಡುಬಂದಿದೆ. ಪ್ರತಿವಾದಿಯ ಪತಿ ನಾಪತ್ತೆಯಾಗಿ 10 ವರ್ಷಗಳ ನಂತರ ಪ್ರತಿವಾದಿಯ ಮಗನಿಗೆ ಮಗನ ಸಹಾನುಭೂತಿಯ ನೇಮಕಾತಿ ನೀಡಬೇಕು ಎಂದು 2013 ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪ್ರಸ್ತುತ ಸಹಾನುಭೂತಿಯ ನೇಮಕಾತಿ ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement