ಬಿಸಿಲನಾಡಿನ 9 ಜಿಲ್ಲೆಗಳಲ್ಲಿ ಕಚೇರಿ ಸಮಯ ಬದಲಾವಣೆ

ಯಾದಗಿರಿ: ಬಿಸಲನಾಡಿನ ಕಲಬುರಗಿ ವಿಭಾಗಧ ಏಳು ಹಾಗೂ ಬೆಳಗಾವಿ ವಿಭಾಗದ 2 ಜಿಲ್ಲೆಗಳಲ್ಲಿ ಏಪ್ರಿ‌ಲ್‌ ಮತ್ತು ಮೇ ತಿಂಗಳ ಬಿಸಲಿನ ತಾಪ ಹೆಚ್ಚಾಗಿರವು ಹಿನ್ನೆಲೆಯಲ್ಲಿ ಸರಕಾರಿ ಕಚೆರಿಯ ಸಮಯ ಬದಲಿಸಿ ಸರಕಾರ ಆದೇಶ ಹೊರಡಿಸಿದೆ.
ಪ್ರತಿ ವರ್ಷವೂ ಎರಡು ತಿಂಗಳ ಕಲ ಸರಕಾರಿ ಕಚೇರಿ ಸಮಯವನ್ನು ಬೆಳಿಗ್ಗೆ 8 ರಿಂದ ªಮದ್ಯಾಹ್ನ 1.30 ಗಂಟೆಯ ವರೆಗೆ ಬದಲಾಯಿಸುತಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಕೊರೊನಾ ಎರಡನೆ ಅಲೆಯ ಹೆಚ್ಚಾಗಿದ್ದರಿಂದ ಸರಕಾರ ನ್ಯಾಯಾಲಯದ ಸಮಯ ಬದಲಿಸಿ ಇತರ ಸರಕಾರಿ ಕಚೇರಿ ಸಮಯವನ್ನು ಎಂದಿನಂತೆ ಮುಂದುವರಿಸಿತ್ತು.
ಆದರೆ ರಾಜ್ಯ ನೌಕರರ ಸಂಘವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಪ್ರತಿ ವರ್ಷದಂತೆ ಕಚೇರಿ ಸಮಯವನ್ನು ಬದಲಿಸುವಂತೆ ಆಗ್ರಹಿಸಿತ್ತು. ಅದರಂತೆ ರಾಜ್ಯ ಸರಕಾರ ಏಪ್ರಿಲ 12 ರಿಂದ ಜಾರಿಗೆ ಬರುವಂತೆ ಕಲಬರುಗಿ ವಿಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ ಮತ್ತು ಬೀದರ ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಸಮಯ ಬದಲಿಸಿ ಆದೇಶ ಹೊರಡಿಸಿದೆ.
ಈ ಸಮಯದಲ್ಲಿ ಸಾರ್ವನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾಯಾನಿರ್ವಹಣಾದಿಕಾರಿ ತುರ್ತು ಕೆಲಸ ನಿರ್ವಹಿಸಲು ಸೂಚಿಸಿದಲ್ಲಿ (ವಿಶೇಷವಾಗಿ ಕೋವಿಡ್-19) ಕಚೇರಿ ಸಮಯ ಬದಲಾವಣೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement