ಕೊರೊನಾ ಹರಡಿದ ನಂತರದ ಅತಿಹೆಚ್ಚು ಒಂದು ದಿನದ ಸೋಂಕಿಗೆ ದೆಹಲಿ ಸಾಕ್ಷಿ.. ಬಹಳ ಗಂಭೀರ ಎಂದ ದೆಹಲಿ ಸಿಎಂ..!

ನವ ದೆಹಲಿ: ದೆಹಲಿಯ ಕೊವಿಡ್‌-19 ಪರಿಸ್ಥಿತಿ “ತುಂಬಾ ಗಂಭೀರವಾಗಿದೆ”, ಕಳೆದ 24 ಗಂಟೆಗಳಲ್ಲಿ 10,732 ಕೊರೊನಾ ಸೋಂಕುಗಳು ವರದಿಯಾಗಿವೆ ಹಾಗೂ 48 ಸಾವುಗಳು ವರದಿಯಾಗಿವೆ.  ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದಲೂ ಅತಿ ಹೆಚ್ಚು ದೈನಂದಿನ ಸೋಂಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ನಾಲ್ಕನೆಯ ಕೊವಿಡ್‌ ಅಲೆಯು ಹಿಂದಿನದಕ್ಕಿಂತ ಅಪಾಯಕಾರಿ. ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ” ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೆಲವೇ ವಾರಗಳಲ್ಲಿ, ದೆಹಲಿಯು ಸಾಮಾನ್ಯ ಸ್ಥಿತಿಗೆ ತಲುಪಿತ್ತು. ಫೆಬ್ರವರಿ 16 ರಂದು ಒಂದೇ ದಿನದಲ್ಲಿ 100 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿತ್ತು.ಆದರೆ ಈಗ ಹತ್ತು ಸಾವಿರ ಪ್ರಕರಣಗಳನ್ನು ದಾಟುವಂತಾಗಿದೆ. ಸಾಂಕ್ರಾಮಿಕ ರೋಗದ ನಾಲ್ಕನೇ ಅಕೆಯು ದೆಹಲಿಯಲ್ಲಿ”ತುಂಬಾ ಅಪಾಯಕಾರಿಯಾಗಿ ಮತ್ತು ವೇಗವಾಗಿ ಹರಡುತ್ತಿದ್ದು, ಅದು ಅನೇಕರು ಗೊಂದಲಕ್ಕೀಡಾಗಿದ್ದಾರೆ. “ಕಳೆದ 10-15 ದಿನಗಳಲ್ಲಿ ಪ್ರಕರಣಗಳು ಬೃಹತ್‌ ಪ್ರಮಾಣದಲ್ಲಿ ಉಲ್ಬಣಗೊಂಡಿವೆ. ಮತ್ತು, ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 10,732 ಪ್ರಕರಣಗಳು ದಾಖಲಾಗಿವೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಇದು ಕೊರೊನಾ ವೈರಸ್ ಆರಂಭವಾದ ನಂತರ ದೆಹಲಿಯಲ್ಲಿ ಅತಿ ಹೆಚ್ಚು ಏಕದಿನ ಸ್ಪೈಕ್ ಆಗಿದೆ ಎಂದು ತಿಳಿಸಿದರು.
ದೆಹಲಿಯಲ್ಲಿ ಈ ಹಿಂದೆ ನವೆಂಬರ್ 11, 2020 ರಂದು ಅತಿ ಹೆಚ್ಚು ಏಕದಿನದ ಸೋಂಕು 8,593 ಪ್ರಕರಣಗಳು ದಾಖಲಾಗಿತ್ತು. ಆ ದಿನ, ನಗರವು 131 ಕೊವಿಡ್‌-19 ಸಾವುಗಳನ್ನು ದಾಖಲಿಸಿತ್ತು. ಇದುವರೆಗಿನ ಅತಿ ಹೆಚ್ಚು ಏಕದಿನ ಸಾವಿನ ಸಂಖ್ಯೆ. ದೆಹಲಿಯಲ್ಲಿ ಲಾಕ್‌ಡೌನ್ ವಿಧಿಸಲು ಬಯಸುವುದಿಲ್ಲ ಆದರೆ ಗಂಭೀರ ರೋಗಿಗಳಿಗೆ ಆಸ್ಪತ್ರೆಗಳು ಮತ್ತು ಹಾಸಿಗೆಗಳು ಲಭ್ಯವಿಲ್ಲದಿದ್ದರೆ ಅಂತಹ ಪರಿಸ್ಥಿತಿ ಉದ್ಭವಿಸಬಹುದು. “ನಮಗೆ ನಿಮ್ಮ ಸಹಕಾರ ಬೇಕು. ನಿಮ್ಮ ಸಹಕಾರವನ್ನು ಪಡೆದರೆ ಮತ್ತು ಆಸ್ಪತ್ರೆಗಳ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೆ, ದೆಹಲಿಯಲ್ಲಿ ಲಾಕ್ ಡೌನ್ ಹೇರುವ ಅಗತ್ಯವಿಲ್ಲ. ಆದರೆ ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಕಡಿಮೆಯಾಗಿದ್ದರೆ ಮತ್ತು ಲಭ್ಯವಿಲ್ಲದಿದ್ದರೆ, ಲಾಕ್‌ಡೌನ್ ವಿಧಿಸಬೇಕಾಗಬಹುದು “ಎಂದು ಅವರು ಹೇಳಿದರು.
ಯಾವುದೇ ಆಸ್ಪತ್ರೆಯ ವ್ಯವಸ್ಥೆಯು ಕುಸಿದಿರುವಾಗ ಮಾತ್ರ ಲಾಕ್‌ಡೌನ್ ವಿಧಿಸಬೇಕು. ನಾನು ಲಾಕ್‌ಡೌನ್ ಪರವಾಗಿಲ್ಲ . ಕೊವಿಡ್‌-19 ಎದುರಿಸಲು ಲಾಕ್‌ಡೌನ್ ಪರಿಹಾರವಲ್ಲ ಎಂದು ನಾನು ನಂಬುತ್ತೇನೆ. ಆಸ್ಪತ್ರೆಯ ವ್ಯವಸ್ಥೆಯು ಕುಸಿದಿದ್ದರೆ ಅದನ್ನು ವಿಧಿಸಬೇಕು “ಎಂದು ಅವರು ಹೇಳಿದರು.
ಆದಾಗ್ಯೂ, ಆಸ್ಪತ್ರೆಗಳಿಗೆ ಧಾವಿಸುವ ಬದಲು ವೈರಸ್ ಸೋಂಕಿಗೆ ಒಳಗಾಗಿದ್ದರೆ ಅವರ ಲಕ್ಷಣ ರಹಿತರಾಗಿದ್ದರೆ ಜನರು ಮನೆಯಲ್ಲೇ ಕ್ವಾರಂಟೈನ್‌ ಇರಬೇಕು ಎಂದು ಅವರು ಕೇಳಿಕೊಂಡರು, ಗಂಭೀರ ರೋಗಿಗಳಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಖಾಲಿ ಇಡಲಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement