ಸತ್ಯಮಂಗಲಂ ಕಾಡಿನಲ್ಲಿ ನಮ್ಮಪ್ಪ ಭಾರಿ ನಿಧಿ ಹುದುಗಿಸಿಟ್ಟಿದ್ದಾನೆ; ಸಂಚಲನ ತಂದ ಕಾಡುಗಳ್ಳ ವೀರಪ್ಪನ್ ಪುತ್ರಿ ಹೇಳಿಕೆ..!

ಚೆನ್ನೈ: ಸತ್ಯಮಂಗಲಂ ಅರಣ್ಯದಲ್ಲಿ ನಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಹುದುಗಿಸಿಟ್ಟಿದ್ದಾನೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ನೀಡಿದ ಹೇಳಿಕೆ ಈಗ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಪ್ರಸ್ತುತ ವಾಲ್ಮುರಿಮಾಯಿ ಕಚ್ಚಿಯಲ್ಲಿ ವಾಸಿಸುತ್ತಿರುವ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಅವರು ರನ್ ಪಿಳ್ಳೈ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಇದೇ ಚಲನಚಿತ್ರದ ತಂಡ ಚೆನ್ನೈನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಲಕ್ಷ್ಮಿ, ತಮ್ಮ ತಂದೆ ವೀರಪ್ಪನ್ ವಾಸಿಸುತ್ತಿದ್ದ ಸತ್ಯಮಂಗಲಂ ಕಾಡಿನಲ್ಲಿ ಅಪಾರ ಪ್ರಮಾಣದ ನಿಧಿ ಹುದುಗಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದೇ ಈಗ ಸಂಚಲನ್ಕೆ ಕಾರಣವಾಗಿದೆ.
ನಮ್ಮ ತಂದೆ ವೀರಪ್ಪನ್ ಗೆ ಸತ್ಯಮಂಗಲಂ ಕಾಡೆಂದರೆ ಬಹಳ ಇಷ್ಟ. ಸತ್ಯಮಂಗಲಂ ಕಾಡಿನಲ್ಲಿ ಅವರು ಬಹಳವರ್ಷ ಇದ್ದರು ಎಂಬುದು ನಮಗೆ ನೆನಪಿದೆ. ಈ ಕಾಡಿನಲ್ಲಿ ತನ್ನ ತಂದೆ ಹುದುಗಿಸಿಟ್ಟಿರುವ ದೊಡ್ಡ ನಿಧಿ ಇದೆ ಮತ್ತು ಅದನ್ನು ಕಂಡುಹಿಡಿಬೇಕು. ಇದರ ಬಗ್ಗೆ ಮಾಹಿತಿ ಇದ್ದ ಅವರ ಅನುಯಾಯಿಗಳು ಯಾರೂ ಈಗ ಬದುಕಿಲ್ಲ. ಹೀಗಾಗಿ ಈ ನಿಧಿ ಎಲ್ಲಿದೆ ಎಂಬುದು ಪ್ರಶ್ನಾರ್ಹವಾಗಿದ್ದು, ಅದನ್ನು ಹುಡುಕಬೇಕಿದೆ ಎಂದು ಹೇಳಿದ್ದಾರೆ
ವೀರಪ್ಪನ್ ಮತ್ತು ಪತ್ನಿ ಮುತ್ತು ಲಕ್ಷ್ಮಿಗೆ, ವಿದ್ಯಾರಾಣಿ ಮತ್ತು ವಿಜಯಲಕ್ಷ್ಮಿ ಎಂಬ ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಯಾಗಿ ಮಹಿಳಾ ಯುವ ಘಟಕದ ನಾಯಕಿಯಾಗಿದ್ದಾರೆ. ಮತ್ತೋರ್ವ ಪುತ್ರಿ ವಿಜಯಲಕ್ಷ್ಮಿ ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ತ ಗುರುತಿಸಿಕೊಂಡಿದ್ದಾರೆ.
ದಂತಚೋರ ಹಾಗೂ ಅರಣ್ಯಗಳ್ಳ ವೀರಪ್ಪನ್‌ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಿಗೆ ತಲೆನೋವಾಗಿದ್ದ. ಸತ್ಯಮಂಗಲಂ ಅರಣ್ಯ ಪ್ರದೇಶವನ್ನು ತನ್ನ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದ ವೀರಪ್ಪನ್ ಶ್ರೀಗಂಧದ ಮರಗಳು, ಆನೆ ದಂತ ಕಳ್ಳಸಾಗಣೆ ಮಾಡುತ್ತಿದ್ದ. ಕನ್ನಡದ ವರ ನಟ ಡಾ.ರಾಜ್ ಕುಮಾರ್ ಅಪಹರಣ ಮಾಡಿ ವೀರಪ್ಪನ್ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ. ಬಳಿಕ 2004ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆತನನ್ನು ಪೊಲೀಸರು ಕೊಂದು ಹಾಕಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 6

  1. geek

    ಸತ್ಯಮಂಗಲ ಫಾರೆಸ್ಟ್ ನ ಅಡ್ರೆಸ್ ಕೊಟ್ಟರೆ ಒಂದಿಷ್ಟು ಜನ ಈಗಲೇ ಹೊರಡುತ್ತಿದ್ದರು.

ನಿಮ್ಮ ಕಾಮೆಂಟ್ ಬರೆಯಿರಿ