ಮಹತ್ವದ ನಿರ್ಧಾರ..ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುವ ವರೆಗೆ ರೆಮ್ಡೆಸಿವಿರ್ ಔಷಧ-ಚುಚ್ಚುಮದ್ದು ರಫ್ತು ನಿಷೇಧ..!

ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದಂತೆ, “ದೇಶದಲ್ಲಿ ಕೊವಿಡ್‌-19 ಪರಿಸ್ಥಿತಿ ಸುಧಾರಿಸುವವರೆಗೆ” ರೆಮ್ಡೆಸಿವಿರ್ ಔಷಧ ಮತ್ತು ಚುಚ್ಚುಮದ್ದುಗಳ ರಫ್ತನ್ನು ಕೇಂದ್ರ ಸರ್ಕಾರ  ನಿಷೇಧಿಸಿ ಭಾನುವಾರ ಆದೇಶಿಸಿದೆ.
ದೇಶದ ಕೊವಿಡ್‌-19 ಪರಿಸ್ಥಿತಿ ಸುಧಾರಿಸುವ ವರೆಗೆ ಇಂಜೆಕ್ಷನ್ ರೆಮ್ಡೆಸಿವಿರ್ ಮತ್ತು ರೆಮ್ಡೆಸಿವಿರ್ ಆಕ್ಟಿವ್ ಫಾರ್ಮಾಸ್ಯುಟಿಕಲ್ ಪದಾರ್ಥಗಳ (ಎಪಿಐ) ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ” ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದಿನ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ರೆಮ್‌ಡೆಸಿವಿರ್ ಉತ್ಪಾದನೆಯನ್ನು ಹೆಚ್ಚಿಸಲು ಔಷಧೀಯ ಇಲಾಖೆ ದೇಶೀಯ ತಯಾರಕರೊಂದಿಗೆ ಸಂಪರ್ಕದಲ್ಲಿದೆ” ಎಂದು ಅದು ಹೇಳಿದೆ.
ತನ್ನ ಹೊಸ ಕ್ರಮದಲ್ಲಿ, ರೆಮ್‌ಡೆಸಿವಿರ್‌ನ ಎಲ್ಲಾ ದೇಶೀಯ ತಯಾರಕರು ತಮ್ಮ ವೆಬ್‌ಸೈಟ್‌ನಲ್ಲಿ ಅವರ ಸ್ಟಾಕಿಸ್ಟ್‌ಗಳು / ವಿತರಕರ ವಿವರಗಳನ್ನು ಪ್ರದರ್ಶಿಸಲು ಹೇಳಿದೆ. ಡ್ರಗ್ಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಇತರ ಅಧಿಕಾರಿಗಳು ದಾಸ್ತಾನು ಪರಿಶೀಲಿಸಲು ನಿರ್ದೇಶಿಸಿದೆ ಮತ್ತು ಹೋರ್ಡಿಂಗ್ ಮತ್ತು ಕಪ್ಪು ಮಾರಾಟವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಕೊವಿಡ್‌-19 ವಿರುದ್ಧದ ಹೋರಾಟದಲ್ಲಿ ರೆಮ್ಡೆಸಿವಿರ್ ಅನ್ನು ಪ್ರಮುಖ ಆಂಟಿ-ವೈರಲ್ ಔಷಧವೆಂದು ಪರಿಗಣಿಸಲಾಗುತ್ತದೆ, ವಿಶೇಷವಾಗಿ ವಯಸ್ಕ ರೋಗಿಗಳಲ್ಲಿ ತೀವ್ರ ತೊಡಕುಗಳನ್ನು ಇದು ತಡೆಯುತ್ತದೆ.
ಕೊರೊನಾ ವೈರಸ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಬಳಸುವ ಎಂಟಿ-ವೈರಲ್ ಔಷಧ ಅಥವಾ ಚುಚ್ಚುಮದ್ದಿನ ಕೊರತೆಯನ್ನು ಹಲವಾರು ರಾಜ್ಯಗಳು ವರದಿ ಮಾಡಿದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿನ ಕೊರೊನಾ ವೈರಸ್ ಪ್ರಕರಣಗಳು ದೈನಂದಿನ ಗರಿಷ್ಠ ಮಟ್ಟ ಮುಟ್ಟುತ್ತಿರುವುದರಿಂದ ಕೆಲವು ರಾಜ್ಯಗಳಲ್ಲಿನ ಹಲವಾರು ಪ್ರದೇಶಗಳ ಜನರು ಔಷಧಿಗಾಗಿ ಔಷಧ ಅಂಗಡಿಗಳ ಹೊರಗೆ ಕ್ಯೂನಲ್ಲಿ ನಿಂತಿದ್ದಾರೆ.
ರೆಮ್ಡೆಸಿವಿರ್ ಚುಚ್ಚುಮದ್ದಿನ ಕೊರತೆ ಇದೆ ಮತ್ತು ಲಸಿಕೆ ಪ್ರಮಾಣವನ್ನು ಪೂರೈಸುವುದು ಅಸಮರ್ಪಕವಾಗಿದೆ ಎಂದು ಮಹಾರಾಷ್ಟ್ರ ಕಂದಾಯ ಸಚಿವ ಬಾಲಾಸಾಹೇಬ್ ಥೋರತ್ ಈ ಹಿಂದೆ ಹೇಳಿದ್ದಾರೆ. ಗುರುವಾರ, ರಾಜ್ಯ ಸರ್ಕಾರವು ರೆಮ್‌ಡೆಸಿವಿರ್‌ನ ಪ್ರತಿ ಬಾಟಲಿಗೆ 1,100ರಿಂದ 1,400 ರ ನಡುವೆ ಬೆಲೆಯನ್ನು ಹಾಕಿತು ಮತ್ತು ಅದರ ಸಂಗ್ರಹಣೆ ಮತ್ತು ಕಪ್ಪು ಮಾರಾಟದ ವಿರುದ್ಧ ಎಚ್ಚರಿಕೆ ನೀಡಿದೆ.
ಏತನ್ಮಧ್ಯೆ, ಭಾನುವಾರ, ಮಧ್ಯಪ್ರದೇಶದ ಅಧಿಕಾರಿಯೊಬ್ಬರು ಗಣನೀಯ ಪ್ರಮಾಣದ ಔಷಧಿ ಬಂದಿದೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯಗಳಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,52,879 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಭಾನುವಾರ ಬೆಳಿಗ್ಗೆ ತಿಳಿಸಿದೆ. ವೈರಸ್ ಹರಡಿದ ನಂತರ ಭಾರತ ಕಂಡ ಹೊಸ ಸೋಂಕುಗಳಲ್ಲಿ ಇದು ಅತಿದೊಡ್ಡ ಜಿಗಿತವಾಗಿದೆ. ಎರಡನೇ ಅಲೆಯು ಕೆರಳಿದಂತೆ ದೇಶದಲ್ಲಿ ಐದು ದಿನಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement