ಸಾರಿಗೆ ನೌಕರರ ಮುಷ್ಕರ ಕಾನೂನು ಬಾಹಿರ,ಸಂಘಕ್ಕೆ ಗೌರವಾಧ್ಯಕ್ಷರ ನೇಮಕಕ್ಕೂ ಅನುಮತಿ ಇಲ್ಲ:ಕಾರ್ಮಿಕ ಸಚಿವ ಹೆಬ್ಬಾರ

ಕಲಬುರಗಿ: ಸಾರಿಗೆ ನೌಕರರು ಕಳೆದ ಐದು ದಿನಗಳಿಂದ ನಡೆಸುತ್ತಿರುವ ಸಾರಿಗೆ ಮುಷ್ಕರ ಕಾನೂನು ಬಾಹಿರವಾಗಿದೆ. ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕಾದ ಸಾರಿಗೆ ನೌಕರರು ಈ ರೀತಿ ಮುಷ್ಕರ ನಡೆಸುವುದು ನಿಯಮಾವಳಿಯಲ್ಲಿ ಇಲ್ಲ. ಹಾಗೂ ಸಂಘಕ್ಕೆ ಗೌರವ ಅಧ್ಯಕ್ಷರನ್ನು ನೇಮಿಸಿಕೊಳ್ಳಲೂ ಅನುಮತಿ ಇಲ್ಲ. ಹೀಗಾಗಿ ಕೂಡಲೇ ಮುಷ್ಕರವನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಮಿಕನ ರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಆದರೆ, ಕಾನೂನು ವಿರುದ್ಧವಾಗಿ ಹೋದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಾರಿಗೆ ಇಲಾಖೆಯಿಂದ ವಜಾಗೊಂಡ ನೌಕರರು ಕಾರ್ಮಿಕ ಇಲಾಖೆ ಮುಂದೆ ಬಂದರೆ ಈ ಬಗ್ಗೆ ವಿಚಾರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕಾದ ಸಾರಿಗೆ ನೌಕರರು ಈ ರೀತಿ ಮುಷ್ಕರ ನಡೆಸುವುದು ನಿಯಮಾವಳಿಯಲ್ಲಿ ಇಲ್ಲ. ಹಾಗೂ ಸಂಘಕ್ಕೆ ಗೌರವ ಅಧ್ಯಕ್ಷರನ್ನು ನೇಮಿಸಿಕೊಳ್ಳಲೂ ಅನುಮತಿ ಇಲ್ಲ. ಈ ಬಗ್ಗೆ ನೌಕರರಿಗೆ ಎಷ್ಟೇ ಹೇಳಿದರೂ ತಿಳಿದುಕೊಳ್ಳುತ್ತಿಲ್ಲ.
ಸಾರಿಗೆ ನೌಕರರ ಮುಷ್ಕರದಿಂದ ಪ್ರತಿದಿನ ಸಾರಿಗೆ ಇಲಾಖೆಗೆ ಬರಬೇಕಾದ ಆದಾಯ ಕೈತಪ್ಪುತ್ತಿದೆ. ರಾಜ್ಯ ಸರಕಾರ ಸಾರಿಗೆ ನೌಕರರ ಸಂಬಳಕ್ಕೆ ಹಣ ಬಿಡುಗಡೆ ಮಾಡಿ ನೆರವು ನೀಡಿದೆ. ಈಗ ಉಪಚುನಾವಣೆ ಇರುವುದರಿಂದ ವೇತನ ಪರಿಷ್ಕರಣೆಯ ಬಗ್ಗೆಯೂ ಮೇ 5ರ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೀಗಿದ್ದರೂ ನೌಕರರು ಮುಷ್ಕರ ನಡೆಸುತ್ತಿದ್ದು, ಸರಿಯಾದ ಕ್ರಮವಲ್ಲ. ಹೀಗಾಗಿ ಅನಿವಾರ್ಯವಾಗಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement