ಮಹತ್ವದ್ದ ಸುದ್ದಿ.. ಇರುಮುಡಿ ಹೊತ್ತು ಚಾರಣ ಮಾಡಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದ ಅರಿಫ್‌ ಮೊಹಮ್ಮದ ಖಾನ್‌

ತಿರುವನಂತಪುರ: ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಎಲ್ಲ ಭಕ್ತರಂತೆ, ವ್ರತಧಾರಿಯಾಗಿ ಸಾಂಪ್ರದಾಯಿಕ “ಮಣಿ ಮಾಲಾ” ಧರಿಸಿ “ಇರುಮುಡಿ” ತಲೆಯ ಮೇಲೆ ಹೊತ್ತುಕೊಂಡು 5 ಕಿ.ಮೀ ಚಾರಣ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಈ ಬಗ್ಗೆ ಕೇರಳ ರಾಜಭವನ ಟ್ವೀಟ್‌ ಮಾಡಿದ್ದು, ಗೌರವಾನ್ವಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಗವಾನ್ ಅಯ್ಯಪ್ಪನ ವಾಸಸ್ಥಾನವಾದ ಶಬರಿಮಲೆಯ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಬರಿಮಲೆ ದೇವಸ್ಥಾನವೂ ಎಲ್ಲಾ ಧರ್ಮದ ಭಕ್ತರನ್ನು ಆಕರ್ಷಿಸುತ್ತದೆ. ಶಬರಿಮಲೆಯ ಸುತ್ತುವರೆದಿರುವ ವಾವರ ಸ್ವಾಮಿಯ ದೇವಾಲಯವು ಕೋಮು ಸೌಹಾರ್ದತೆ ಮತ್ತು ಏಕತೆಗೆ ಉದಾಹರಣೆಯಾಗಿದೆ ಎಂದು ಹೇಳಿದೆ.

5 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

ನಿಮ್ಮ ಕಾಮೆಂಟ್ ಬರೆಯಿರಿ

advertisement