ಸುಪ್ರೀಂಕೋರ್ಟಿನ 44 ಸಿಬ್ಬಂದಿಗೆ ಕೊರೊನಾ ಸೋಂಕು.. ಒಂದು ತಾಸು ತಡವಾಗಿ ವಿಚಾರಣೆ ಆರಂಭ..!!

ನವ ದೆಹಲಿ: ಸುಪ್ರೀಂಕೋರ್ಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನ್ಯಾಯಮೂರ್ತಿಗಳಿಗೂ ಆತಂಕ ಎದುರಾಗಿದೆ. ಶನಿವಾರ ಸುಪ್ರೀಂ ಕೋರ್ಟಿನ 44 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿತ್ತು.
ಹೀಗಾಗಿ ನ್ಯಾಯಮೂರ್ತಿಗಳು ಅವರ ನಿವಾಸದಿಂದಲೇ ವಿಚಾರಣೆ ನಡೆಸಲಿದ್ದು, ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪ್ರಕರಣಗಳ ವಿಚಾರಣೆ ಆರಂಭವಾಗಲಿದೆ.10:30ಕ್ಕೆ ನಿಗದಿಯಾಗಿದ್ದ ನ್ಯಾಯಪೀಠವು 11:30ಕ್ಕೆ ಕಾರ್ಯಾರಂಭಿಸಲಿದೆ, 11ಕ್ಕೆ ನಿಗದಿಯಾಗಿದ್ದ ಪ್ರಕರಣಗಳ ವಿಚಾರಣೆ 12ರಿಂದ ಶುರುವಾಗಲಿವೆ ಎಂದು ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ನ ಆವರಣ, ಕಚೇರಿ ಸೇರಿದಂತೆ ಮತ್ತಿತರ ಕಡೆ ಸ್ಯಾನಿಟೈಸ್ ಮಾಡಲಾಗಿದೆ. ಕಳೆದೆರಡು ದಿನಗಳಿಂದ ಇಲ್ಲಿನ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಸದ್ಯ ನ್ಯಾಯಮೂರ್ತಿಗಳ ಕಚೇರಿಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ.
ನ್ಯಾಯಮೂರ್ತಿಗಳು ವಿಡಿಯೋ ಕಾನರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ. ಕೋರ್ಟ್ ನ್ಯಾಯಮೂರ್ತಿಗಳ ಕಚೇರಿ ಹಾಗೂ ರೆಜಿಸ್ಟ್ರಿಯಲ್ಲಿನ ಹಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕೋರ್ಟ್ ಆವರಣದಲ್ಲಿ ಸೋಂಕು ನಿವಾರಕ ಸಿಂಪಡಿಸುವ ಕಾರ್ಯವನ್ನು ಸೋಮವಾರ ನಡೆಸಲಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ