ಕೆಲಸಕ್ಕೆ ಹೋಗುತ್ತಿದ್ದ ಯುವತಿಗೆ ಗುಪ್ತಾಂಗ ಪ್ರದರ್ಶನ: ಯುವಕನ ಬಂಧನ

posted in: ರಾಜ್ಯ | 0

ಮಂಗಳೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕ ಮೊಬೈಲ್ ನಲ್ಲಿ ಮಾತನಾಡುವ ಸೋಗಿನಲ್ಲಿ ತನ್ನ ಗುಪ್ತಾಂಗ ಪ್ರದರ್ಶಿಸಿರುವ ಘಟನೆ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಮಾಸ್ಕ್ ಹಾಗೂ ಟೋಪಿ ಧರಿಸಿದ್ದ ಮೊಬೈಲ್‌ನಲ್ಲಿ ಮಾತನಾಡುತ್ತ ಕೆಲಸಕ್ಕೆ ಹೋಗುತ್ತಿದ್ದ ಯುವತಿಗೆ ತನ್ನ ಗುಂಪ್ತಾಂಗ ತೋರಿಸಿ ಚೇಷ್ಟೆ ಮಾಡಿದ್ದ. ಇದರಿಂದ ಹೆದರಿದ ಯುವತಿ ಸಮೀಪದಲ್ಲಿದ್ದ ಟೈಲರಿಂಗ್ ಹೋಗಿ ಸಹಾಯ ಕೇಳಿದ್ದಳು.. ಸ್ಥಳದಲ್ಲಿದ್ದ ಜನರಿಗೆ ಅವನ ಕೃತ್ಯದ ಬಗ್ಗೆ ತಿಳಿದು ಅವರು ಬರುವಷ್ಟರಲ್ಲಿ ಆತ ಪರಾರಿಯಾಗಿದ್ದ, ಆದರೆ ವೇಳೆ ಅಲ್ಲಿದ್ದವರೊಬ್ಬರು ಯುವಕನ ಫೋಟೋವನ್ನು ಮೊಬೈಲ್ ನಲ್ಲಿ ಸೆರೆಹಿಡಿದುಬಿಟ್ಟಿದ್ದರು.
ನಂತರ ಯುವತಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಪೊಲೀಸರು ಒಂದು ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.ಇದಕ್ಕೂ ಮೊದಲು ಈ ವ್ಯಕ್ತಿ ಮಹಿಳೆಯರೆದುರು ಈತರಹದ ಕುಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ