ಇನ್ಫೋಸಿಸ್‌ನಿಂದ ಜುಲೈನಲ್ಲಿ ವೇತನ ಹೆಚ್ಚಳ ಘೋಷಣೆ, ಈ ವರ್ಷ 25, 000 ಹೊಸ ನೇಮಕಾತಿ ಪ್ರಕಟ

posted in: ರಾಜ್ಯ | 0

ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜೊತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಜಾಗತಿಕವಾಗಿ 25, 000 ಹೊಸ ನೇಮಕಾತಿ ಬಗ್ಗೆ ಕಂಪನಿ ಪ್ರಕಟಿಸಿದೆ.
2021ರ ಆರ್ಥಿಕ ವರ್ಷದಲ್ಲಿ 1,00,000 ಕೋಟಿ ರೂ. ಆದಾಯ ದಾಖಲಿಸಿ ಹೊಸ ಮೈಲಿಗಲ್ಲು ಸಾಧಿಸಿದೆ. ಇದೇ ಸಂದರ್ಭದಲ್ಲಿ ಮುಂದಿನ ಜುಲೈ ತಿಂಗಳಲ್ಲಿ ಸಂಬಳ ಏರಿಕೆ ಬಗ್ಗೆ ಘೋಷಿಸಲಾಗಿದೆ.
ಇನ್ಫೋಸಿಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲೀಲ್ ಪರೇಖ್ ಸಂಬಳ ಏರಿಕೆ ಸುದ್ದಿ ಖಚಿತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸಿಒಒ ಪ್ರವೀಣ್ ರಾವ್, ಅಟ್ರಿಷನ್ ದರ ಹೆಚ್ಚಿರುವ ವಿಭಾಗಗಳನ್ನು ಗುರಿಯಾಗಿಸಿಕೊಂಡು ಸಂಬಳ ಏರಿಕೆ, ಬೋನಸ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಾರ್ಚ್ 2021 ರ ತ್ರೈಮಾಸಿಕದಲ್ಲಿ ಇದರ ಆದಾಯವು 13.1% ನಷ್ಟು ಹೆಚ್ಚಳವಾಗಿ, 26,311 ಕೋಟಿ ರೂ.ಗಳಿಗೆ ತಲುಪಿದೆ. ಎಂ ಕಂಪನಿಯ ಆರ್ಥಿಕ ವರ್ಷ 2021 ನಿವ್ವಳ ಲಾಭ 16.6% ಏರಿಕೆ ಕಂಡು, 19,351 ಕೋಟಿಗೆ ತಲುಪಿದ್ದರೆ, ಆದಾಯವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 10.7% ರಷ್ಟು ಹೆಚ್ಚಳವಾಗಿ 1,00,472 ಕೋಟಿಗೆ ತಲುಪಿದೆ.
3ನೇ ತ್ರೈಮಾಸಿಕದಲ್ಲಿ ಶೇ 10.3ರಷ್ಟಿದ್ದ ಆಟ್ರಿಷನ್ ದರವು 4ನೇ ತ್ರೈಮಾಸಿಕದಲ್ಲಿ ಶೇ. 15.2ರಷ್ಟಾಗಿದೆ. ಮಾರ್ಚ್ 31, 2021ಕ್ಕೆ ಅನ್ವಯವಾಗುವಂತೆ ಇನ್ಫೋಸಿಸ್ 10,307 ಹೊಸ ನೇಮಕಾತಿ ಮಾಡಿಕೊಂಡಿದ್ದು, ಒಟ್ಟಾರೆ, 2,59,619 ಉದ್ಯೋಗಿಗಳನ್ನು ಹೊಂದಿದೆ. ಶೇ 38.6ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದಲ್ಲಿ ಕ್ಯಾಂಪಸ್‌ನಿಂದ 21,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ. ಒಟ್ಟಾರೆಯಾಗಿ, ಇನ್ಫೋಸಿಸ್ ಕಳೆದ ವರ್ಷ ಸುಮಾರು 36,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಈ ಆರ್ಥಿಕ ವರ್ಷದಲ್ಲಿ 25,000 ಹೊಸ ನೇಮಕಾತಿ ನಡೆಯಲಿದ್ದು, ಈ ಪೈಕಿ 24,000 ಜನರನ್ನು ಭಾರತದಲ್ಲೇ ನೇಮಕ ಮಾಡಲಾಗುತ್ತದೆ ಎಂದು ಸಿಒಒ ಪ್ರವೀಣ್ ರಾವ್ ಹೇಳಿದರು.
ಅಮೆರಿಕ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪೈಕಿ ಶೇ.69ರಷ್ಟು ಮಂದಿ ಸ್ಥಳೀಯರೇ ಇದ್ದಾರೆ. ಹೀಗಾಗಿ, ವೀಸಾ ನೀತಿ ಬದಲಾವಣೆಗೆ ತಕ್ಕಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಅಟ್ರಿಷನ್ ದರ ಅಧಿಕವಾಗಿದ್ದು, ಇನ್ನೂ ಒಂದೆರಡು ತ್ರೈಮಾಸಿಕ ಇದೇ ದರ ಮುಂದುವರೆಯುವ ಸಾಧ್ಯತೆಯಿದೆ. ವರ್ಕ್ ಫ್ರಂ ಹೋಂ ಸೌಲಭ್ಯ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.
ಅವರಲ್ಲಿ 19,000 ಮಂದಿ ಭಾರತದಿಂದ ಬಂದವರು). ಒಟ್ಟಾರೆಯಾಗಿ, ಇನ್ಫೋಸಿಸ್ ಕಳೆದ ವರ್ಷ ಸುಮಾರು 36,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಎಂದು ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ