ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಲಿದ್ದಾರೆ ಸಾವಿರಾರು ವಲಸೆ ಕಾರ್ಮಿಕರು, ಬೇಕು ಮುನ್ನೆಚ್ಚರಿಕೆ ಕ್ರಮ

posted in: ರಾಜ್ಯ | 0

ಮುಂಬೈ: ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸುಸ್ತಾದ ಮಹಾರಾಷ್ಟ್ರವು ಮೇ೧ರ ವರೆಗೆ ೧೪೪ ಸೆಕ್ಷನ್‌ ಜಾರಿ ಮಾಡಿ ರಾಜ್ಯಾದ್ಯಂತ ಕರ್ಫ್ಯೂ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಬಹುತೇಕ ವ್ಯಾಪಾರ-ವಹಿವಾಟುಗಳು, ಕಾರ್ಖಾನೆ, ಹೊಟೇಲ್‌, ರೆಸ್ಟಾರೆಂಟ್‌ ಕೆಲಸ ಕಾರ್ಯಗಳು ಬಾಧಿತವಾಗಲಿದೆ. ಹೀಗಾಗಿ ಕರ್ನಾಟಕದಿಂದ ಉದ್ಯೋಗ ಅರಸಿ ಹೋದ ಜನರು ಮರಳಿ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇದು ಕೊರೊನಾ ಸಂಕ್ಯೆ ಉಲ್ಬಣಿಸುತ್ತಿರುವ ರಾಜ್ಯದಲ್ಲಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಅತ್ತ ತೊಡುವಂತೆಯೀ ಇಲ್ಲ ಇತ್ತ ಬಿಡುವಂತೆಯೂ ಇಲ್ಲ ಎಂಬ ಸ್ಥಿತಿ ಸರ್ಕಾರದ್ದು.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕಾಗಿ ವಲಸೆ ಹೋದವರಿಗೆ ಕರ್ಫ್ಯೂ ನಿಂದ ಕೆಲಸಕ್ಕೆ ಹೊಡೆತ ಬೀಳಲಿದೆ ಎಂದು ಅರಿತು ಅವರು ತವರು ರಾಜ್ಯಕ್ಕೆ ಬರುತ್ತಿದ್ದಾರೆ.ಮುಖ್ಯವಾಗಿ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದು ಹೆಚ್ಚು.
ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಮೊದಲನೇ ಅಲೆಯ ದುಪ್ಪಟ್ಟಾಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಲೇ ಸಿಗುತ್ತಿಲ್ಲ. ಅಷ್ಟೊಂದು ಉಲ್ಬಣಾವಸ್ಥೆಗೆ ಹೋಗಿದೆ. ಈಗ ಕರ್ಫ್ಯೂ ಜಾರಿ ಮಾಡಲಾಗಿದ್ದು, ಹೀಗಾಗಿ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಎಲ್ಲ ರೈಲು ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ವಲಸೆ ಕಾರ್ಮಿಕರೇ ತುಂಬಿ ಹೋಗಿದ್ದಾರೆ. ಯಾವುದೇ ಬಸ್ ಅಥವಾ ರೈಲು ಸಿಕ್ಕರೂ ಹತ್ತಿಕೊಂಡು ಊರು ತಲುವ ಆತುರದಲ್ಲಿದ್ದಾರೆ. ಅವರಿರುವ ಜಾಗಗಳಲ್ಲಿ ಸ್ಯಾನಿಟೈಸ್ ವ್ಯವಸ್ಥೆ ಇಲ್ಲ, ಸಾಮಾಜಿಕ ಅಂತರ ಇಲ್ಲ. ಹೀಗಾಗಿ ಅವರು ರಾಜ್ಯ ಪ್ರವೇಶಿಸುವಾಗ ಸರಿಯಾದ ರೀತಿಯಲ್ಲಿ ಕೊರೊನಾ ಪರೀಕ್ಷೆ, ಸ್ಯಾನಿಟೈಸ್ ಹಾಗೂ ಕ್ವಾರಂಟೈನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ, ಕರ್ಫ್ಯೂ ಜಾರಿ ಘೋಷಣೆಯ ನಂತರ ಮಂಗಳವಾರ ರಾತ್ರಿಯಿಂದಲೇ ಅಲ್ಲಿಂದ ಜನ ಹೊರಟಿದ್ದು ಎರಡು ದಿನಗಳೊಳಗೆ ರಾಜ್ಯಕ್ಕೆ ಬರಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಅಷ್ಟರಲ್ಲಿಯೇ ತುರ್ತಾಗಿ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ